Asianet Suvarna News Asianet Suvarna News

ಪರಶುರಾಮ್ ವಾಗ್ಮೋರೆ ನಿರ್ದೋಷಿ: ಕೋರ್ಟ್ ತೀರ್ಪು

  • ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿರುವ ಪರಶುರಾಮ್ ವಾಗ್ಮೋರೆ
  • 1 ಜನವರಿ 2012ರಂದು ಸಿಂದಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಹಾರಾಟ ಪ್ರಕರಣ
  • ಶ್ರೀರಾಮಸೇನೆಯ 6 ಮಂದಿ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರಾಷ್ಟ್ರದ್ರೋಹ ಪ್ರಕರಣ
Vijayapura Court Acquits Parashuram Waghmore in Pakistan Flag Hoisting Case

ವಿಜಯಪುರ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಗೆ ಪಾಕಿಸ್ತಾನ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಖುಲಾಸೆಯಾಗಿದೆ.

1 ಜನವರಿ 2012ರಂದು ಸಿಂದಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ವಾಗ್ಮೊರೆ ಸೇರಿದಂತೆ 6 ಮಂದಿ ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಸಿಂದಗಿಯ ಮಿನಿ ವಿಧಾನಸೌಧದ ಎದುರು ಪಾಕಿಸ್ತಾನದ ಧ್ವಜ ಹಾರಿಸಿ ರಾಷ್ಟ್ರದ್ರೋಹವೆಸಗಿದ ಆರೋಪದ ಮೇಲೆ ಪೊಲೀಸರು ಶ್ರೀರಾಮಸೇನೆ ಸಂಘಟನೆಯ ಆರು ಮಂದಿಯನ್ನು ಘಟನೆಯ ಮೂರು ದಿನಗಳಲ್ಲೇ ಬಂಧಿಸಿದ್ದರು.

6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ,  ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಗೀತಾ ಕೆ.ಬಿ ಆರೋಪಮುಕ್ತಗೊಳಿಸಿದ್ದಾರೆ. ವಕೀಲ ಎಸ್.ಎಚ್ ಲಗಳಿ, ವಾಗ್ಮೋರೆ ಪರ ವಾದ ಮಂಡಿಸಿದ್ದರು.

ಸೆಕ್ಷನ್ 153 A and B ಹೇಳುವ ಪ್ರಕಾರ ದೇಶದ್ರೋಹದ ಕೃತ್ಯ ಎಂದಾಗ ಅಗತ್ಯ ದಾಖಲಾತಿಗಳನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಬೇಕಿತ್ತು. ಆದರೆ ಚಾರ್ಜಶೀಟ್ ಸಲ್ಲಿಕೆ ವೇಳೆ ಪೊಲೀಸ್ ಇಲಾಖೆ ಎಡವಟ್ಟಿನಿಂದ ಆಗಿರುವ ತಾಂತ್ರಿಕ ದೋಷದಿಂದ ಮಾನ್ಯ ನ್ಯಾಯಾಲಯ ಆರೋಪಮುಕ್ತ ಗೊಳಿಸಿ ಆದೇಶ ಹೊರಡಿಸಿದೆ ಎಂದು ಆರೋಪಿಗಳ ಪರ ವಕೀಲ ಲಗಳಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಜೊತೆಗೆ ಶ್ರೀರಾಮ ಸೇನೆಯ ಕಾರ್ಯಕರ್ತರಾಗಿದ್ದ ಅನೀಲ್ ಸೋಲಕರ್, ಮಲ್ಲನಗೌಡ ಪಾಟೀಲ್, ರೋಹಿತ್ ನಾವಿ, ಸುನೀಲ್ ಅಗಸರ, ಪರಶುರಾಮ್ ವಾಗ್ಮೋರೆ ಸಹೋದರ ಅರುಣ ವಾಗ್ಮೋರೆ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.  ಇನ್ನು ಪ್ರಕರಣದಲ್ಲಿ ಅಂದು ಬಾಲಾರೋಪಿಯಾಗಿದ್ದವನ ವಿಚಾರಣೆ ಬಾಲಾಪರಾಧ ಕೋರ್ಟ್ನಲ್ಲಿ  ನಡೆಯಲಿದೆ ಎನ್ನಲಾಗಿದೆ. 

ಇತ್ತ ಗೌರಿ ಹತ್ಯೆ ಪ್ರಕರಣದ ಆರೋಪಿ ವಾಗ್ಮೋರೆಯನ್ನ ಪೊಲೀಸರು ಕರೆದೊಯ್ಯುತ್ತಿರುವಾಗ ಮಗನ ಮುಖ ನೋಡಲು ಬಂದ ತಾಯಿ ಜಾನಕಿಬಾಯಿ ಮಾಧ್ಯಮಗಳ ಹರಿಹಾಯ್ದಿದ್ದಾಳೆ. ವಾಗ್ಮೋರೆ ಚಿತ್ರಿಕರಣಕ್ಕೆ ತಡೆದದ್ದಲ್ಲದೆ, ಕ್ಯಾಮರಾ ಮೇನ್ ಗಳ ಮೇಲೆ ಕಲ್ಲು ಎಸೆಯಲು ಯತ್ನಿಸಿದ್ದಾಳೆ.

ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು [ಎಸ್ ಐಟಿ] ಕಳೆದ ಜೂನ್ ನಲ್ಲಿ  ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದೆ. 

Follow Us:
Download App:
  • android
  • ios