ನಿನ್ನೆ ಬೆಳಿಗ್ಗೆಯಷ್ಟೇ ತನಗೆ ಜೀವ ಬೆದರಿಕೆ ಇದ್ದು ಪೋಲಿಸರು ರಕ್ಷಣೆ ನೀಡುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯಿಡೀ ಪೋಲಿಸ್ ಭದ್ರತೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ವೈದ್ಯರು ಹೇಳಿಕೆ ನೀಡಿದ್ದರು. ಆದರೆ ಮಧ್ಯರಾತ್ರಿ ಮಹಿಳೆ ವಿಜಯಲಕ್ಷ್ಮೀ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಎಲ್ಲಿ ಹೋಗಿದ್ದಾರೆನ್ನುವುದು ನಿಗೂಢವಾಗಿದೆ. ರಾತ್ರೋ ರಾತ್ರಿ ಈ ಮಹಿಳೆ ಡಿಸ್ಚಾರ್ಜ್ ಆಗುವ ಮೂಲಕ ಮತ್ತೆ ಈ ಪ್ರಕರಣದಲ್ಲಿ ಹೈಡ್ರಾಮಾನೇ ಸೃಷ್ಟಿಸಿದಂತಾಗಿದೆ.
ಬಾಗಲಕೋಟೆ(ಡಿ.14): ಸಚಿವ ಮೇಟಿ ರಾಸಲೀಲೆ ಆರೋಪ ಪ್ರಕರಣದಲ್ಲಿ ವಿಡಿಯೋ ಸಂದರ್ಶನದಲ್ಲಿದ್ದ ಮಹಿಳೆ ವಿಜಯಲಕ್ಷ್ಮೀ ಇದ್ದಕ್ಕಿದ್ದಂತೆ ನಿನ್ನೆಯಷ್ಟೇ ಅನಾರೋಗ್ಯಕ್ಕೀಡಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಆದರೆ ರಾತ್ರೋರಾತ್ರಿ ಮಹಿಳೆ ಅಲ್ಲಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಿನ್ನೆ ಬೆಳಿಗ್ಗೆಯಷ್ಟೇ ತನಗೆ ಜೀವ ಬೆದರಿಕೆ ಇದ್ದು ಪೋಲಿಸರು ರಕ್ಷಣೆ ನೀಡುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯಿಡೀ ಪೋಲಿಸ್ ಭದ್ರತೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ವೈದ್ಯರು ಹೇಳಿಕೆ ನೀಡಿದ್ದರು.
ಆದರೆ ಮಧ್ಯರಾತ್ರಿ ಮಹಿಳೆ ವಿಜಯಲಕ್ಷ್ಮೀ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಎಲ್ಲಿ ಹೋಗಿದ್ದಾರೆನ್ನುವುದು ನಿಗೂಢವಾಗಿದೆ. ರಾತ್ರೋ ರಾತ್ರಿ ಈ ಮಹಿಳೆ ಡಿಸ್ಚಾರ್ಜ್ ಆಗುವ ಮೂಲಕ ಮತ್ತೆ ಈ ಪ್ರಕರಣದಲ್ಲಿ ಹೈಡ್ರಾಮಾನೇ ಸೃಷ್ಟಿಸಿದಂತಾಗಿದೆ.
