ಬೆಂಗಳೂರು (ಡಿ.25): ಪೊಲೀಸ್ ಮಹಾನಿರ್ದೇಶ ಓಂಪ್ರಕಾಶ್  ಆದೇಶ ಮೆರೆಗೆ ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮಿ ನೀಡಿದ್ದ ದೂರನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

ತನಗೆ ಜೀವ ಬೆದರಿಕೆ ಇದೆಯೆಂದು, ಡಿಎಆರ್ ಪೇದೆ ಸುಭಾಷ್ ಮುಗಳಖೋಡ್ ಮತ್ತು ಮೂವರು ಸಹಚರರ ವಿರುದ್ಧ ವಿಜಯಲಕ್ಷ್ಮಿ ಬಾಗಲಕೋಟೆ ಎಸ್​ಪಿಗೆ ಕಳೆದ ಡಿ.17ರಂದು ದೂರು ನೀಡಿದ್ದರು.

 ಕೊಲೆ ಬೆದರಿಕೆ ಹಾಕಿರುವವರು ಮಾಜಿ ಸಚಿವ ಮೇಟಿ ವಿರುದ್ಧ ಆರೋಪಿಸುವಂತೆ ಒತ್ತಾಯಿಸಿದ್ದರು ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಳು.

ವಿಜಯಲಕ್ಷ್ಮಿ ದೂರು ಪ್ರಕರಣವನ್ನ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡ ತನಿಖೆ ನಡೆಸುತ್ತಿತ್ತು.