ಈ ಬಗ್ಗೆ ಅಕ್ರಮ ಹಣ ತಡೆಗಟ್ಟುವಿಕೆ ಕಾಯಿದೆಯನ್ವಯ ವಿಶೇಷ ಕೋರ್ಟ್'ಗೆ ದೂರು ಸಲ್ಲಿಸುವ ಮುನ್ನ ಈ ಮಾಹಿತಿ ತಿಳಿಸಿದೆ. ಭಾರತವಲ್ಲದೆ ಅಮೆರಿಕಾ, ಐರ್ಲಾಂಡ್, ಮಾರಿಷಸ್ ಹಾಗೂ ಫ್ರಾನ್ಸ್ ಸೇರಿದಂತೆ ವಿವಿಧ ವ್ಯವಹಾರೇತರ 13ಕ್ಕೂ ಹೆಚ್ಚು ಕಂಪನಿಗಳಲ್ಲಿ ಮಲ್ಯಾ ಹಣ ತೊಡಗಿಸಿದ್ದಾರೆ ಎಂದು ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ.
ನವದೆಹಲಿ(ಜು.13): ಭಾರತೀಯ ಬ್ಯಾಂಕ್'ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ಲಂಡನ್'ನಲ್ಲಿ ತಲೆತಪ್ಪಿಸಿಕೊಂಡಿರುವ ಉದ್ದೇಶಿತ ಸುಸ್ತೀದಾರ ವಿಜಯ್ ಮಲ್ಯಾ ಭಾರತ ಹಾಗೂ ವಿದೇಶಿಗಳ ಹಲವು ವ್ಯವಹಾರೇತರ ಕಂಪನಿಗಳಲ್ಲಿ ಅಕ್ರಮವಾಗಿ 1301.67 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.
ಈ ಬಗ್ಗೆ ಅಕ್ರಮ ಹಣ ತಡೆಗಟ್ಟುವಿಕೆ ಕಾಯಿದೆಯನ್ವಯ ವಿಶೇಷ ಕೋರ್ಟ್'ಗೆ ದೂರು ಸಲ್ಲಿಸುವ ಮುನ್ನ ಈ ಮಾಹಿತಿ ತಿಳಿಸಿದೆ. ಭಾರತವಲ್ಲದೆ ಅಮೆರಿಕಾ, ಐರ್ಲಾಂಡ್,ಮಾರಿಷಸ್ ಹಾಗೂ ಫ್ರಾನ್ಸ್ ಸೇರಿದಂತೆ ವಿವಿಧ ವ್ಯವಹಾರೇತರ 13ಕ್ಕೂ ಹೆಚ್ಚು ಕಂಪನಿಗಳಲ್ಲಿ ಮಲ್ಯಾ ಹಣ ತೊಡಗಿಸಿದ್ದಾರೆ ಎಂದು ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ.
ಇಡಿ ಸಂಸ್ಥೆಯು ಕಳೆದ ತಿಂಗಳು ಐಡಿಬಿಐ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಮಲ್ಯಾ ಹಾಗೂ ಇತರ 9 ಮಂದಿಯ ವಿರುದ್ಧ ದೂರು ದಾಖಲಿಸಿತ್ತು. ಮಲ್ಯಾ ಐಡಿಬಿಐ ಬ್ಯಾಂಕಿನಿಂದ950 ಕೋಟಿ ರೂ.ಗೂ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಲು ಇವರು ನೆರವಾಗಿದ್ದರು. ಅಲ್ಲದೆ ಇವರ ವಿರುದ್ಧ ಬಂಧನದ ವಾರಂಟ್ ಕೂಡ ಹೊರಡಿಸಲಾಗಿತ್ತು.
