ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ಫೌಂಡೇಶನ್ ಆಯೋಜಿಸಿದ್ದ ಚಾರಿಟಿ ಡಿನ್ನರ್ ನಲ್ಲಿ ಉದ್ಯಮಿ ವಿಜಯ್ ಮಲ್ಯ ಭಾಗವಹಿಸಿದ್ದರು. ಆದರೆ ಕೋಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಮಲ್ಯರಿಂದ ಸಮಾನ ಅಂತರ ಕಾಯ್ದುಕೊಂಡಿದ್ದಾರೆ.

ನವದೆಹಲಿ (ಜೂ.06): ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ಫೌಂಡೇಶನ್ ಆಯೋಜಿಸಿದ್ದ ಚಾರಿಟಿ ಡಿನ್ನರ್ ನಲ್ಲಿ ಉದ್ಯಮಿ ವಿಜಯ್ ಮಲ್ಯ ಭಾಗವಹಿಸಿದ್ದರು. ಆದರೆ ಕೋಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಮಲ್ಯರಿಂದ ಸಮಾನ ಅಂತರ ಕಾಯ್ದುಕೊಂಡಿದ್ದಾರೆ.

ಟೀಂ ಇಂಡಿಯಾ ವಿವಾದದಿಂದ ದೂರವಿರಲು ಮಲ್ಯರನ್ನು ಆದಷ್ಟು ಬೇಗ ಕಳುಹಿಸಲಾಗಿದೆ ಎನ್ನಲಾಗಿದೆ.

ಪ್ರಸ್ತುತ ಇಂಗ್ಲೆಂಡ್’ನಲ್ಲೇ ಆಶ್ರಮ ಪಡೆದಿರುವ ಮಲ್ಯ ಭಾರತ-ಪಾಕಿಸ್ತಾನ ನಡುವೆ ಭಾನುವಾರ ಎಡ್ಬಾಸ್ಟನ್ ನಲ್ಲಿ ನಡೆದ ಮ್ಯಾಚನ್ನು ವೀಕ್ಷಿಸಿದ್ದಾರೆ.

ಮಲ್ಯರನ್ನು ವಿರಾಟ್ ಕೋಹ್ಲಿ ಆಹ್ವಾನಿಸಿರಲಿಲ್ಲ. ಸಾಮಾನ್ಯವಾಗಿ ಚಾರಿಟಿ ಡಿನ್ನರ್’ಗೆ ಆಹ್ವಾನಿಸಿದ ಗೆಸ್ಟ್’ಗಳು ತಮ್ಮ ತ್ಮೀಯರನ್ನು ಆಹ್ವಾನಿಸುತ್ತಾರೆ. ಮಲ್ಯ ಉಪಸ್ಥಿತಿಯಿಂದ ಕೊಹ್ಲಿ ಹಾಗೂ ಟೀಂ ಇಂಡಿಯಾ ಮುಜುಗರ ಉಂಟಾಯಿತು. ಹಾಗಾಗಿ ಅಂತರವನ್ನು ಕಾಯ್ದುಕೊಂಡಿದ್ದರು ಎಂದು ಬಿಸಿಸಿಐ ಹೇಳಿದೆ.