2016-17ರ ಆವೃತ್ತಿಗೂ ಮುನ್ನ ಸ್ವ್ಯಾನ್'ಸೀ ಸಿಟಿ ಎಫ್'ಸಿ ತಂಡವನ್ನು ಅಮೆರಿಕನ್ ಕನ್ಸೂರ್ಟಿಯಮ್ ಖರೀದಿ ಮಾಡಿತ್ತು.
ಲಂಡನ್(ಜು.22): ಉದ್ಯಮಿ ವಿಜಯ್ ಮಲ್ಯ ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ತಂಡವೊಂದನ್ನು ಖರೀದಿಸಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಲ್ಯ ಇಪಿಎಲ್'ನ ಸ್ವ್ಯಾನ್'ಸಿಸಿಟಿ ಫುಟ್ಬಾಲ್ ಕ್ಲಬ್ ತಂಡವನ್ನು ಖರೀದಿ ಮಾಡಲು ಆಸಕ್ತಿ ತೋರಿದ್ದು, ತಂಡಕ್ಕಾಗಿ ಅಂದಾಜು 919 ಕೋಟಿ ರುಪಾಯಿ ಹೂಡಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇದು ನಿಜವಾದರೆ, ಕ್ರೀಡಾಕ್ಷೇತ್ರದಲ್ಲಿ ಇದು ಅವರ ಅತಿದೊಡ್ಡ ಹೂಡಿಕೆಯಾಗಲಿದೆ.
2016-17ರ ಆವೃತ್ತಿಗೂ ಮುನ್ನ ಸ್ವ್ಯಾನ್'ಸೀ ಸಿಟಿ ಎಫ್'ಸಿ ತಂಡವನ್ನು ಅಮೆರಿಕನ್ ಕನ್ಸೂರ್ಟಿಯಮ್ ಖರೀದಿ ಮಾಡಿತ್ತು.