9 ಸಾವಿರ ಕೋಟಿ ಸಾಲಮಾಡಿ ಲಂಡನ್'ನಲ್ಲಿ ತಲೆ ಮರೆಸಿಕೊಂಡಿದ್ದ ಉದ್ಯಮಿ ವಿಜಯ್ ಮಲ್ಯರವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧನವಾದ ಅರ್ಧ ಗಂಟೆಯಲ್ಲೇ ಮಲ್ಯಗೆ ಲಂಡನ್'ನ ವೆಸ್ಟ್ಮಿನಿಸ್ಟರ್ ಕೋರ್ಟ್ನಿಂದ ಜಾಮೀನು ಸಿಕ್ಕಿದೆ.
ನವದೆಹಲಿ (ಅ.03): 9 ಸಾವಿರ ಕೋಟಿ ಸಾಲಮಾಡಿ ಲಂಡನ್'ನಲ್ಲಿ ತಲೆ ಮರೆಸಿಕೊಂಡಿದ್ದ ಉದ್ಯಮಿ ವಿಜಯ್ ಮಲ್ಯರವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧನವಾದ ಅರ್ಧ ಗಂಟೆಯಲ್ಲೇ ಮಲ್ಯಗೆ ಲಂಡನ್'ನ ವೆಸ್ಟ್ಮಿನಿಸ್ಟರ್ ಕೋರ್ಟ್ನಿಂದ ಜಾಮೀನು ಸಿಕ್ಕಿದೆ.
ಲಂಡನ್ ಪೊಲೀಸರು ಮಲ್ಯರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಬಂಧನವಾದ ಅರ್ಧ ಗಂಟೆಯಲ್ಲೇ ಮಲ್ಯಗೆ ಜಾಮೀನು ಸಿಕ್ಕಿ ಹೊರ ಬಂದಿದ್ದಾರೆ. 9 ಸಾವಿರ ಕೋಟಿ ಬ್ಯಾಂಕಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಇವರ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರಕರಣ ದಾಖಲಿಸಿತ್ತು.
6 ತಿಂಗಳಲ್ಲಿ 2ನೇ ಬಾರಿ ಮಲ್ಯರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 19ರಂದು ಬಂಧಿಸಲಾಗಿತ್ತು. ಸುಪ್ರೀಂಕೋರ್ಟ್ ಸೇರಿ ಹಲವು ಕೋರ್ಟ್ಗಳಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಹಲವು ಬಾರಿ ಸಮನ್ಸ್ ನೀಡಿದ್ದರೂ ಭಾರತಕ್ಕೆ ಬಾರದ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
