ವಿಡಿಯೋಕಾನ್, ಜೇಪಿ ಅಸೋಸಿಯೇಟ್ಸ್, ಉತ್ತಮ ಗಾಲ್ವಾ, ವೀಸಾ ಸ್ಟೀಲ್, ನಾಗಾರ್ಜುನ ಆಯಿಲ್,ಇಸ್ಪಾತ್ ಕೋಟೆಡ್ ಸೇರಿ 40 ಕಂಪನಿಗಳು ಪಟ್ಟಿಯಲ್ಲಿ ಇವೆ.

ಮುಂಬೈ(ಆ.30): ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಮತ್ತೆ 40 ಕಂಪನಿಗಳ 2ನೇ ಪಟ್ಟಿಯನ್ನು ‘ಬಾಕಿದಾರ’ಪಟ್ಟಿಗೆ ಸೇರಿಸಿ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ ಒಪ್ಪಿಸಿದೆ. ಇದರೊಂದಿಗೆ ದಿವಾಳಿ ಹಂತಕ್ಕೆ ಬಂದು ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿಸಲಾಗದ ಪಟ್ಟಿಗೆ ಈ ಕಂಪನಿಗಳು ಸೇರಿಕೊಂಡಂತಾಗಿದೆ. ವಿಡಿಯೋಕಾನ್, ಜೇಪಿ ಅಸೋಸಿಯೇಟ್ಸ್, ಉತ್ತಮ

ಗಾಲ್ವಾ, ವೀಸಾ ಸ್ಟೀಲ್, ನಾಗಾರ್ಜುನ ಆಯಿಲ್,ಇಸ್ಪಾತ್ ಕೋಟೆಡ್ ಸೇರಿ 40 ಕಂಪನಿಗಳು ಪಟ್ಟಿಯಲ್ಲಿ ಇವೆ. ಇವು ಬಹುತೇಕ ಮೂಲಸೌಕರ್ಯ ಹಾಗೂ ಇಂಧನ ವಲಯದ ಕಂಪನಿಗಳಾಗಿವೆ. 35-40 ಖಾತೆಗಳು ಕಟಬಾಕಿದಾರರ ಪಟ್ಟಿಯಲ್ಲಿದ್ದು, ಸ್ಟೇಟ್ ಬ್ಯಾಂಕ್ ಒಂದೇ 25-26 ಖಾತೆ ಹೊಂದಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ವೀಸಾ ಸ್ಟೀಲ್ ಷೇರು ಶೇ.124, ವಿಡಿಯೋಕಾನ್ ಷೇರು ಶೇ.3ರಷ್ಟು ಕುಸಿದವು. ಈ ಹಿಂದೆ ಜೂನ್‌ನಲ್ಲಿ 12 ಇಂಥ ಖಾತೆಗಳನ್ನು ಗುರುತಿಸಿತ್ತು. ಪ್ರತಿ ಕಂಪನಿಯು 5 ಸಾವಿರ ಕೋಟಿ ರು.ನಂತೆ 1.75ಲಕ್ಷ ಕೋಟಿ ರು. ಬಾಕಿ ಉಳಿಸಿಕೊಂಡಿದ್ದವು.