Asianet Suvarna News Asianet Suvarna News

(ವಿಡಿಯೋ) ಅರಣ್ಯಾಧಿಕಾರಿ ವೇಗದ ರಬಸಕ್ಕೆ ಇಬ್ಬರು ಬಲಿ: ನೋಡುಗರಿಗೆ ಬೆಚ್ಚಿ ಬೀಳಿಸಿದ ಘಟನೆ

ಕಾರು ರಭಸವಾಗಿ ಚಲಿಸಿದ ದೃಶ್ಯ ಸಿಸಿ ಟೀವಿಯಲ್ಲಿ ದಾಖಲಾಗಿದೆ.

Video shows forest officers car running over two cyclists
  • Facebook
  • Twitter
  • Whatsapp

ಜೈಪುರ್(ಮೇ.17): ಅರಣ್ಯಾಧಿಕಾರಿಯೊಬ್ಬ ವೇಗವಾಗಿ ತನ್ನ ಕಾರನ್ನು ಚಾಲನೆ ಮಾಡಿದ ಪರಿಣಾಮ ಇಬ್ಬರು ಸೈಕಲ್ ಸವಾರರು ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಈ ದುರಂತ ಸಂಭವಿಸಿದ್ದು, ಮೇ.2 ರಂದು ಕಾರು ರಭಸವಾಗಿ ಚಲಿಸಿದ ದೃಶ್ಯ ಸಿಸಿ ಟೀವಿಯಲ್ಲಿ ದಾಖಲಾಗಿದೆ. ಮೃತರಿಬ್ಬರು ಕೂಲಿ ಕಾರ್ಮಿಕರಾಗಿದ್ದು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಸ್ಕೋಡಾ ಕಾರಿನಲ್ಲಿ ವೇಗವಾಗಿ ಬಂದ ಅರಣ್ಯಾಧಿಕಾರಿ ಜೈ'ಸಿಂಗ್ ಸೈಕಲ್ ಮೇಲೆ ನುಗ್ಗಿಸಿದ್ದಾನೆ. ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Follow Us:
Download App:
  • android
  • ios