ಲಾಸ್ ಎಂಜಿಲೀಸ್ ರಸ್ತೆಯಲ್ಲಿ ಕಾರು ಕಳ್ಳನ ಕರಾಮತ್ತುವೇಗವಾಗಿ ಕಾರು ಓಡಿಸುವ ಪರಿಗೆ ಬೆಚ್ಚಿ ಬಿದ್ದ ನಗರಅಡ್ಡಾದಿಡ್ಡಿಯಾಗಿ ಕಾರು ಓಡಿಸಿ ಸಿಕ್ಕಿಬಿದ್ದ ಕಳ್ಳ
ಲಾಸ್‌ಎಂಜಿಲೀಸ್(ಜು.5): ಈ ವಿಡಿಯೋ ಖಂಡಿತ ಯಾವುದೇ ಹಾಲಿವುಡ್ ಚಿತ್ರದ ದೃಶ್ಯಕ್ಕಿಂತ ಕಡಿಮೆ ಇಲ್ಲ. ಇದು ಕಾರು ಕಳ್ಳನೊಬ್ಬ ಲಾಸ್‌ಎಂಜಿಲೀಸ್ ನ ರಸ್ತೆಗಳಲ್ಲಿ ತಾನು ಕದ್ದ ಕಾರನ್ನು ಓಡಿಸಿದ ಪರಿ. ಕಾರು ಕಳ್ಳನೊಬ್ಬ ಮನೆ ಮುಂದೆ ನಿಂತಿದ್ದ ಕಾರನ್ನು ಕದ್ದು, ಪೊಲೀಸರ ಕೈಗೆ ಸಿಗಬಾರದೆಂದು ಅತ್ಯಂತ ವೇಗವಾಗಿ ಕಾರನ್ನು ಓಡಿಸಿದ್ದಾನೆ.
ಲಾಸ್‌ಎಂಜಿಲೀಸ್ ನಂತಹ ಟ್ರಾಫಿಕ್ ಹೆಚ್ಚಿರುವ ನಗರದಲ್ಲಿ ಈ ಕಳ್ಳ ಕೃಉ ಓಡಿಸುವ ಬಗೆ ಎಂತವರನ್ನೂ ನಡುಗಿಸಿ ಬಿಡುತ್ತದೆ. ಟ್ರಾಫಿಕ್ ಸಿಗ್ನಲ್, ಜೋಡು ರಸ್ತೆ ಹೀಗೆ ಎಲ್ಲೆಂದರಲ್ಲಿ ಈ ಕಳ್ಳ ಕದ್ದ ಕಾರನ್ನು ನುಗ್ಗಿಸಿದ್ದಾನಸ್ ಇದೇ ವೇಳೆ ತನ್ನ ಕಾರಿಗೆ ಅಡ್ಡ ಬರುವ ಕಾರುಗಳಿಗೆ ನೇರವಾಗಿ ಗುದ್ದಿ ಎಸ್ಕೇಪ್ ಆಗುವ ಈತನ ಪರಿ ಪೊಲೀಸರಿಗೇ ಅಚ್ಚರಿ ಮೂಡಿಸಿದೆ. ತನ್ನ ಮುಂದೆ ಕಾರನ್ನು ಹಿಂಬದಿಯಿಂದ ಗುದ್ದಿ, ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಮೈ ಜುಂ ಎನಿಸುವಂತಿವೆ.
ಆದರೆ ಕೊನೆಯಲ್ಲಿ ಎಲ್ಲ ಕಳ್ಳರಿಗೂ ಆಗುವ ಗತಿ ಇವನಿಗೂ ಆಗಿದೆ. ಕಾರನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದ ಪೊಲೀಸರು, ಕೊನೆಯಲ್ಲಿ ನಗರದ ಹೊರವಲಯದಲ್ಲಿ ಈ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಕಳ್ಳ ಅತ್ಯಂತ ವೇಗವಾಗಿ ಕಾರು ಓಡಿಸುತ್ತಿರುವ ದೃಶ್ಯವನ್ನು ಪೊಲೀಸರು ಹೆಲಿಕಾಪ್ಟರ್ ಮೂಲಕ ಸೆರೆ ಹಿಡಿದಿದ್ದಾರೆ.
