ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಭೂಪ! ವಿಡಿಯೋ ವೈರಲ್

Video of Weird Birthday Cebration of Hubballi Man Goes Viral
Highlights

  • ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ವ್ಯಕ್ತಿ
  • ತಲ್ವಾರ್‌ನಿಂದ ಕೇಕ್ ಕತ್ತರಿಸಿ ಅದರಿಂದಲೇ ತಿನ್ನಿಸಿದ ಭೂಪ

 

ಹುಬ್ಬಳ್ಳಿ: ವ್ಯಕ್ತಿಯೊಬ್ಬ ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಲ್ವಾರ್‌ನಿಂದ ಕೇಕ್ ಕತ್ತರಿಸಿ ಅದರಿಂದಲೇ ತಿನ್ನಿಸಿದ ಭೂಪನ ವೀಡಿಯೋ ನೋಡಿ ಹುಬ್ಬಳ್ಳಿಗರು ಬೆಚ್ಚಿಬಿದ್ದಿದ್ದಾರೆ.

ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಣೇಶ ಪೇಟ್ನಲ್ಲಿರುವ ಈತನ ಮೀನದ ಅಂಗಡಿ ಇಟ್ಟುಕೊಂಡಿರುವ ಇರ್ಶಾದ ಎಂಬಾತ ಸ್ನೇಹಿತರ ಜತೆ ಸೇರಿ, ತಲ್ವಾರ್, ಚೂರಿಯಿಂದ ಕೇಕ್ ಕತ್ತರಿಸಿ, ಅದರಿಂದಲೇ ತಿನ್ನಿಸಿದ್ದಾನೆ.

"

loader