ಸೋಶಿಯಲ್ ಮೀಡಿಯಾದ ಸ್ವಭಾವೇ ಹಾಗೇ... ಯಾವುದು ಯಾವಾಗ ವೈರಲ್ ಆಗುತ್ತದೆ ಎಂದು ಹೇಳಕ್ಕಾಗೊಲ್ಲ! ಯಾವ ಮಾಹಿತಿ ಯಾವಾಗ, ಎಷ್ಟು ಸಲ ನಮ್ಮ ಫೋನ್ ಗೆ ಬರುತ್ತೆ ಎಂದೂ ಊಹಿಸಲಾಗದು! ಆ ವಿಡಿಯೋಗಳಿಗೆ ಪ್ರಸ್ತುತತೆಯ ಹಂಗೂ ಇರಲ್ಲ. ಕೆಲವೊಮ್ಮೆ, ಕ್ಷಣದ ಹಿಂದೆ ನಡೆದ ಘಟನೆ ವೈರಲ್ ಆದರೆ, ಇನ್ನು ಕೆಲವೊಮ್ಮೆ ವರ್ಷ/ದಶಕಗಳ ಹಿಂದಿನ ವಿಡಿಯೋ ವೈರಲ್ ಆಗುತ್ತದೆ. ಅದರ ಜೊತೆಗೆ ಹಳೆಯ ನೆನಪುಗಳನ್ನು ಮುನ್ನೆಲೆಗೆ ತರುತ್ತವೆ.   

ಅಂತಹದ್ದೇ ಒಂದು ಬೆಳವಣಿಗೆಯಲ್ಲಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿವಾಹದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಅವರಿಬ್ಬರ ವಿವಾಹ 25 ಫೆಬ್ರವರಿ 1968ರಲ್ಲಿ ನಡೆದಿತ್ತು. ವಿವಾಹ ಸಮಾರಂಭದ ಬ್ಲ್ಯಾಕ್ & ವೈಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ವಿಜಯ್ ಲಕ್ಷ್ಮಿ ಪಂಡಿತ್ ಮುಂತಾದ ಗಣ್ಯರನ್ನು ಕಾಣಬಹುದು.

ವರ ರಾಜೀವ್ ಗಾಂಧಿ, ವಧು ಸೋನಿಯಾ ಗಾಂಧಿ ಹೇಗೆ ಕಾಣಿಸುತ್ತಿದ್ದಾರೆ, ನೀವೇ ನೋಡಿ ಆ ಅಪರೂಪದ ವಿಡಿಯೋ...