ವಾಷಿಂಗ್ಟನ್[ಆ.18]: ಅಮೆರಿಕಾದ ಓಹಿಯೋನ ಎಕ್ರಾನ್ ಜೂನ್ಲಲಿ ನಡೆದ ಘಟನೆಯೊಂದು ಬಹುತೇಕರನ್ನು ಅಚ್ಚರಿಗೀಡು ಮಾಡಿದೆ. ಬಾಲಕನನ್ನು ನೋಡಿದ ಕರಡಿಯೊಂದು ಸೊಂಟ ಬಳುಕಿಸಿ ಕುಣಿಯಲಾರಂಭಿಸಿದೆ. ವಿಡಿಯೋ ನೋಡಿದ ಕೆಲವರು ಕರಡಿ ತನ್ನ ಬೆನ್ನು ಗೋಡೆಗೆ ಉಜ್ಜಿಕೊಳ್ಳುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಚೆಯೇನ್ ಹೆಸರಿನ ಈ ಕರಡಿ ಸೋಶಿಯನಲ್ ಮೀಡಿಯಾದಲ್ಲಿ ಹೀರೋ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಚೆಯೆನ್ ಡಾನ್ಸ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಹಲವಾರು ನೋಡುಗರು ಇದು ಜಂಗಲ್ ಬುಕ್ ಸಿನಿಮಾದಲ್ಲಿ ಬರುವ 'ಬಲ್ಲೂ'ನಂತಿದೆ. ಅದರಂತೆಯೇ ವರ್ತಿಸುತ್ತದೆ ಎಂದಿದ್ದಾರೆ. 

ಎಕ್ರಾನ್ ಜೂ ಅಧಿಕಾರಿಗಳು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದಾಗ ಕರಡಿ ಹೊರಭಾಗದಲ್ಲಿ ನಿಂತಿದ್ದ ಮಕ್ಕಳನ್ನು ನೋಡಿ ಡಾನ್ಸ್ ಮಾಡುತ್ತಿರುವಂತೆ ಭಾಸವಾಗುತ್ತಿದೆ.