ಬಾಲಕನಿಗೆ ಚಪ್ಪಲಿ ಎತ್ತಿಕೊಟ್ಟ 'ಸ್ಮಾರ್ಟ್' ಬಾತುಕೋಳಿ: ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ!

ಗುಡ್ಡದಿಂದ ಕೆಳ ಬಿತ್ತು ಬಾಲಕನ ಚಪ್ಪಲಿ| ಬಾಲಕನ ನೆರವಿಗೆ ಧಾವಿಸಿದ ಬಾತುಕೋಳಿ| ಕೊಕ್ಕಿನಲ್ಲಿ ಚಪ್ಪಲಿ ಎತ್ತಿ ಬಾಲಕನಿಗೆ ನೀಡಲು ಬಾತುಕೋಳಿ ಯತ್ನ| ಪದೇ ಪದೇ ವಿಫಲವಾದರೂ ಹಠ ಬಿಡದ ಬಾತುಕೋಳಿ| ಬಾತುಕೋಳಿಯ ಸ್ಮಾರ್ಟ್ ನಡೆಗೆ ನೆಟ್ಟಿಗರು ಫಿದಾ

Video of a smart duck retrieving a kid footwear is the best thing you will see today

ಕ್ಯಾಲಿಫೋರ್ನಿಯಾ[ಆ.26]: ಸ್ಯಾನ್​ ಫ್ರಾನ್ಸಿಸ್ಕೋದ ಮೈಲಾ ಅಗುಯಿಲಾ ಎಂಬಾಕೆ ತಮ್ಮ ಫೇಸ್ ಬುಕ್ ನಲ್ಲಿ ಬಾತುಕೋಳಿಯ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಸದ್ಯ ಇದು ಎಲ್ಲೆಡೆ ವೈರಲ್ ಆಗುತ್ತಿದೆ. 'ಸ್ಮಾರ್ಟ್' ಬಾತುಕೋಳಿಯ ವಿಡಿಯೋ ನೋಡಿದವರೆಲ್ಲಾ, ಅಚ್ಚರಿ ವ್ಯಕ್ತಪಡಿಸಿದ್ದು, ವಿಡಿಯೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಹೌದು ಅಗುಯಿಲಾ ಹಳ್ಳಿಯೊಂದಕ್ಕೆ ಪ್ರಯಾಣಿಸುತ್ತಿದ್ದಾಗ ಕಂಡು ಬಂದ ದೃಶ್ಯವನ್ನು ಮೊಬೈಲ್ ನಲ್ಲೆ ಸೆರೆ ಹಿಡಿದಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿ ಸೇರ್ ಮಾಡುವ ಮೂಲಕ ಇತರರೊಂದಿಗೆ ಶೇರ್ ಮಾಡಿಕೊಂಡಿದ್ದಾಋಎ. ವಿಡಿಯೋದಲ್ಲಿ ಬಾಲಕನೊಬ್ಬ ಪುಟ್ಟದಾದ ಗುಡ್ಡವೊಂದರ ಮೇಲೆ ಕುಳಿತ್ತಿದ್ದು, ಕೆಳಗಿರುವ ಪುಟ್ಟ ಬಾತುಕೋಳಿ ಕೆಳಗೆ ಬಿದ್ದಿದ್ದ ಬಾಲಕನ ಚಪ್ಪಲಿಯನ್ನು ತನ್ನ ಕೊಕ್ಕಿನಲ್ಲಿ ಎತ್ತಿ ಕೊಡುವ ಪ್ರಯತ್ನ ನಡೆಸುತ್ತಿರುವುದನ್ನು ನೋಡಬಹುದು.

ಬಾತುಕೋಳಿ ಮೂರು ಬಾರಿ ಚಪ್ಪಲಿಯನ್ನು ತನ್ನ ಕೊಕ್ಕಿನಲ್ಲಿ ಎತ್ತಿ ಬಾಲಕನಿಗೆ ತಂದು ಕೊಡಲು ಯತ್ನಿಸುತ್ತದೆ. ಆಧರೆ ಇನ್ನೇನು ಚಪ್ಪಲಿ ಬಾಲಕನ ಕೈ ಸೇರಲಿದೆ ಎನ್ನುವಷ್ಟರಲ್ಲಿ ಬಿದ್ದು ಬಿಡುತ್ತದೆ. ಆದರೆ ಹಠ ಬಿಡದ ಬಾತುಕೋಳಿ ಮತ್ತೆ ಮತ್ತೆ ಒಪ್ರಯತ್ನಿಸಿದ್ದು, ನಾಲ್ಕನೇ ಬಾರಿ ಚಪ್ಪಲಿಯನ್ನು ಸೇಫಾಗಿ ಬಾಲಕನ ಕೈ ತಲುಪಿಸುವಲ್ಲಿ ಯಶಸ್ವಿಯಾಗುತ್ತದೆ.

ಸದ್ಯ ಈ ವಿಡಿಯೋ ನೆಟ್ಟಿಗರ ಮನ ಕದ್ದಿದೆ. ಬಾತುಕೋಳಿಯ ಸ್ಮಾರ್ಟ್ ನೆಸ್ ಗೆ ಫಿದಾ ಆಗಿರುವ ಸೋಶಿಯಲ್ ಮೀಡಿಯಾ ಬಳಕೆದಾರರು, ಅದ್ಭುತ ಎಂದು ಕಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios