ಹಣ ಕಳೆದುಕೊಂಡವರಲ್ಲಿ ಕೆಲವರು ಇಂದು ಬೆಳಗ್ಗೆ ಸಿಎಂ ಕಚೇರಿ ಕೃಷ್ಣಗೆ ತೆರಳಿ ಅಳಲು ತೋಡಿಕೊಂಡರು. ನೊಂದವರ ಅಳಲು ಕೇಳಿಸಿಕೊಂಡ ಸಿಎಂ ಈ ಸಂಬಂಧ ಕ್ರಮಕೈಗೊಳ್ಳಲು ಗೃಹ ಸಚಿವರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬೆಂಗಳೂರು (ಜ.21): ಸುವರ್ಣ ನ್ಯೂಸ್ ವರದಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗಳ ತಲುಪಿದೆ. ಮನೆ ಹಾಗೂ ಸೈಟ್ ನೀಡುವುದಾಗಿ ನೂರಾರು ಕೋಟಿ ರೂಪಾಯಿ ಹಣ ವಂಚಿಸಿರುವ ಟಿಜಿಎಸ್, ಡ್ರೀಮ್ಸ್ ಜಿಕೆ ಕಂಪನಿ ಮಾಲಿಕ ಸಚಿನ್ ನಾಯಕ್ ವಿರುದ್ಧ ಕ್ರಮಕೈಗೊಳ್ಳುವಂತೆ ನೊಂದವರು ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ.
ಹಣ ಕಳೆದುಕೊಂಡವರಲ್ಲಿ ಕೆಲವರು ಇಂದು ಬೆಳಗ್ಗೆ ಸಿಎಂ ಕಚೇರಿ ಕೃಷ್ಣಗೆ ತೆರಳಿ ಅಳಲು ತೋಡಿಕೊಂಡರು. ನೊಂದವರ ಅಳಲು ಕೇಳಿಸಿಕೊಂಡ ಸಿಎಂ ಈ ಸಂಬಂಧ ಕ್ರಮಕೈಗೊಳ್ಳಲು ಗೃಹ ಸಚಿವರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಲ್ಲದೆ, ಇಂದು ಬೆಳಗ್ಗೆ ಇದೇ ತಂಡ ಗೃಹ ಸಚಿವ ಜಿ.ಪರಮೇಶ್ವರ್ ಅವರ ನಿವಾಸಕ್ಕೂ ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿದ್ದರು. ಗೃಹ ಸಚಿವರು ತಮ್ಮ ಕಚೇರಿ ಬಂದು ಮನವಿ ಸಲ್ಲಿಸುವಂತೆ ಸೂಚಸಿ ತೆರಳಿದಿದ್ದಾರೆ.