Asianet Suvarna News Asianet Suvarna News

ರಂಗಕರ್ಮಿ ಸುರೇಂದ್ರನಾಥ್‌ಗೆ ನಾರ್ವೆಯ ಇಬ್ಸನ್ ಸ್ಕಾಲರ್‌ಶಿಪ್

ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಹಿರಿಯ ರಂಗಕರ್ಮಿ, ರಂಗಶಂಕರದ ಕಲಾ ನಿರ್ದೇಶಕ ಸುರೇಂದ್ರನಾಥ್/ ಇಪ್ಪತ್ತೈದು ಲಕ್ಷ ರೂಪಾಯಿಗಳ ಈ ಸ್ಕಾಲರ್‌ಶಿಪ್‌/ ನಾಟಕಕಾರ ಹೆನ್ರಿಕ್ ಇಬ್ಸೆನ್ ಹೆಸರಿನಲ್ಲಿ ನೀಡುವ ಸ್ಕಾಲರ್ ಶಿಪ್ 

Veteran theatre personality Surendranath bags Ibsen Norway scholarship
Author
Bengaluru, First Published Sep 20, 2019, 9:24 PM IST

ಬೆಂಗಳೂರು[ಸೆ. 20]  ಹಿರಿಯ ರಂಗಕರ್ಮಿ, ರಂಗಶಂಕರದ ಕಲಾ ನಿರ್ದೇಶಕ ಸುರೇಂದ್ರನಾಥ್ ಅವರು ಅಂತಾರಾಷ್ಟ್ರೀಯ ಮಟ್ಟದ ‘ಇಬ್ಸನ್ ಸ್ಕಾಲರ್‌ಶಿಪ್ 2019’ ಕ್ಕೆ ಆಯ್ಕೆಯಾಗಿದ್ದಾರೆ.

ಪ್ರಸಿದ್ಧ ನಾಟಕಕಾರ ಹೆನ್ರಿಕ್ ಇಬ್ಸೆನ್ ಹೆಸರಿನಲ್ಲಿ ನಾರ್ವೆಯ ಸರಕಾರದ ಸಹಯೋಗದೊಂದಿಗೆ, ಇಬ್ಸೆನ್‌ ಥಿಯೇಟರ್ ನೀಡುವ ಈ ಸ್ಕಾಲರ್‌ಶಿಪ್‌ಗೆ ವಿಶ್ವಾದ್ಯಂತದ 160 ದೇಶಗಳ ಪ್ರತಿನಿಧಿಗಳು ಕೋರಿಕೆ ಸಲ್ಲಿಸಿದ್ದರು. ಇವರಲ್ಲಿ ಭಾರತದಿಂದ ಸುರೇಂದ್ರನಾಥ್ ಅವರು ಸೇರಿದಂತೆ ಒಟ್ಟು ಐದು ದೇಶದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ. ‘ಕಲ್ಚರಿಂಗ್ ವಾಯ್ಸ್ ಥ್ರೂ ಆ್ಯಕ್ಟ್ ಆ್ಯಂಡ್ ಆ್ಯನ್ ಎನಿಮಿ ಆ್ಯಂಡ್ ಪೀಪಲ್’ ಎಂಬ ಪ್ರಾಜೆಕ್ಟ್ ಅನ್ನು ಸುರೇಂದ್ರನಾಥ್ ಪ್ರಸ್ತುತ ಪಡಿಸಿದ್ದರು. 
 
ಎಲ್ಲಿ ಪ್ರದಾನ? ಎರಡು ವರ್ಷಗಳಿಗೊಮ್ಮೆ ನೀಡುವ ಈ ಸ್ಕಾಲರ್‌ಶಿಪ್‌ಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ. ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳ ಈ ಸ್ಕಾಲರ್‌ಶಿಪ್‌ ಅನ್ನು ಅಕ್ಟೋಬರ್‌ ತಿಂಗಳಲ್ಲಿ ಇಬ್ಸೆನ್‌ ತವರು ಸ್ಕೀನ್‌ನಲ್ಲಿ ಪ್ರದಾನ ಮಾಡಲಾಗುವುದು.

ಪ್ರತಿಯೊಂದು ದನಿಗೂ ಮಹತ್ವ ಇದೆ:  ಈ ಕುರಿತು ಪ್ರತಿಕ್ರಿಯೆ ನೀಡಿದ ಸುರೇಂದ್ರನಾಥ್, ‘ಪ್ರಜಾಸತ್ತೆಗೂ ಬಹುಮತದ ಪ್ರಜಾಸತ್ತೆಗೂ ವ್ಯತ್ಯಾಸವಿದೆ. ಪ್ರಜಾಸತ್ತೆಯಲ್ಲಿ ಪ್ರತಿಯೊಂದು ದನಿಗೂ ಮಹತ್ವವಿದೆ. ಮೆಜಾರಿಟೇರಿಯನ್‌ ಡೆಮಾಕ್ರಸಿಯಲ್ಲಿ (ಬಹುಮತದ ಪ್ರಜಾಸತ್ತೆ)ಯಲ್ಲಿ ಅಲ್ಪ ಸಂಖ್ಯಾತರ (ಮೈನಾರಿಟಿ) ದನಿಗಳನ್ನು ಸುಲಭವಾಗಿ ಧಮನಿಸಬಹುದು. ಈ ಮೆಜಾರಿಟೇರಿಯನ್‌ ಡೆಮಾಕ್ರಸಿ ಯಾವ ರೂಪದಲ್ಲಾದರೂ ಇರಬಹುದು ಎಂದು ತಿಳಿಸಿದರು.

ಡೆಮಾಕ್ರಸಿ ಎಂದರೇನು?  ರಾಜಕೀಯ, ಧಾರ್ಮಿಕ, ಭಾಷಾ, ಲಿಂಗ. ಯಾವುದೇ ಬಹುಮತವಿರಲಿ, ಇಲ್ಲಿ ವೈಯಕ್ತಿಕ ದನಿಗಳಿಗೆ ಆಸ್ಪದವಿಲ್ಲ. ಬಹುಮತದ ಆಳ್ವಿಕೆಯನ್ನು ಪ್ರಶ್ನಿಸದೇ ಅಲ್ಪ ಸಂಖ್ಯಾತರು ಒಪ್ಪಿಕೊಳ್ಳಬೇಕೆಂಬ ಅಲಿಖಿತ ನಿಯಮವಿದೆ.  ನಿಜ ಅರ್ಥದಲ್ಲಿ ಇದು ಡೆಮಾಕ್ರಸಿಯಲ್ಲ. ಇದು ಕೇವಲ ಇಂದಿನ ಭಾರತದ ಚಿತ್ರವಷ್ಟೇ ಅಲ್ಲ, ಜಗತ್ತಿನಾದ್ಯಂತ ನಡೆಯುತ್ತಿರುವ ವಿದ್ಯಮಾನ. ಇಬ್ಸೆನ್‌ ಕೂಡಾ ಹೇಳಿದ್ದು ಇದನ್ನೇ, ಬಹುಮತಕ್ಕೆ ಶಕ್ತಿಯಿರಬಹುದು, ಆದರೆ ಅದು ಹೇಳಿದ್ದೆಲ್ಲವೂ ಸತ್ಯವಲ್ಲ. ಈ ಬಹುಮತದ ವಿರುದ್ಧ ದನಿಯೆತ್ತ ಬಲ್ಲ ವ್ಯಕ್ತಿಯೇ ನಿಜವಾದ ಶಕ್ತಿಯುಳ್ಳವನು ಎಂದು ಪ್ರತಿಪಾದಿಸಿದರು.

ವಿದೇಶದಲ್ಲಿ ಓದಲು ಸರ್ಕಾರವೇ ಹಣ ಕೊಡುತ್ತೆ!

ಇಬ್ಸೆನ್‌  ನಾಟಕಗಳು ಏನು ಹೇಳುತ್ತವೆ?   ಈ ವಿಚಾರಗಳನ್ನೇ ಇಬ್ಸೆನ್‌ ತಮ್ಮ ಈ ನಾಟಕದಲ್ಲಿ ಪ್ರತಿಪಾದಿಸುವುದು. ಇಬ್ಸೆನ್‌ ಅವರಿಗೆ ನಾಗರಿಕ ಮುಖ್ಯವಾಗುವುದಿಲ್ಲ. ಯಾಕೆಂದರೆ ನಾಗರಿಕ ಸಮಾಜದಲ್ಲಿ ಪಳಗಿದ (ಡೊಮೆಸ್ಟಿಕೇಟೆಡ್‌ ಅಂತೀವಲ್ಲ ಅದು) ಪ್ರಜೆ. ಆತ ಬಹುಮತದ ರೀತಿ ನೀತಿಗಳನ್ನು ಅರಿತು ಬದುಕನ್ನು ರೂಪಿಸಿಕೊಳ್ಳಬಲ್ಲ ಚಾಣಾಕ್ಷ. ಇಬ್ಸೆನ್‌ ಅವರಿಗೆ ಈ ಸಂದರ್ಭದಲ್ಲಿ ವ್ಯಕ್ತಿ ಮುಖ್ಯವಾಗುತ್ತಾನೆ. ಯಾಕೆಂದರೆ ವ್ಯಕ್ತಿ ಮಾತ್ರ ಬಹುಮತದ ಧಾಟಿಯನ್ನು ಪ್ರಶ್ನಿಸಬಲ್ಲ. (ವಿಪರ್ಯಾಸವೆಂದರೆ ಇಬ್ಸೆನ್‌ ಕೂಡಾ ಈ ರೀತಿಯ ಬಹುಮತೀಯ ದಬ್ಬಾಳಿಕೆಗೆ ತುತ್ತಾದವರು. ಅವರ ಅನೇಕ ನಾಟಕಗಳನ್ನು ಬಹಿಷ್ಕರಿಸಲಾಗಿತ್ತು.) ಈ ಪ್ರಾಜೆಕ್ಟ್‌ನಲ್ಲಿ ನಾವು ಪ್ರಯತ್ನ ಪಡುವುದೂ ಇದನ್ನೇ ಎಂದು ತಾವು ಮಂಡಿಸಿದ ವಿಚಾರಗಳ ಕೆಲ ಅಂಶ ತೆರೆದಿರಿಸಿದರು.

ಆಯಾ ಪ್ರದೇಶಗಳ ಜ್ವಲಂತ ಸಮಸ್ಯೆಗಳನ್ನು ಮೂಲವಾಗಿಟ್ಟುಕೊಂಡು ಈ ನಾಟಕದ ನಾಲ್ಕನೇ ಅಂಕವನ್ನು ಆ ಸಂದರ್ಭಕ್ಕೆ ಅಳವಡಿಸಿಕೊಂಡು ಪ್ರಸ್ತುತ ಪಡಿಸುವುದು. ಹೊಸ ಪ್ರಶ್ನೆಗಳನ್ನು ಕೇಳುವಂತೆ ಕುಮ್ಮಕ್ಕು ನೀಡುವುದು ನಮ್ಮ ಉದ್ದೇಶ. ಈ ಪ್ರಯೋಗವನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ಪ್ರಯೋಗಿಸಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios