ಮೂರನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಕಾಂಗ್ರೆಸ್ ನಾಯಕಿ ತಮ್ಮ ಇನ್ ಸ್ಟಾಗ್ರಾಮ್  ಖಾತೆಯಲ್ಲಿ ವಿಚಾರ ಬಹಿರಂಗ ಮಾಡಿದ್ದಾರೆ. 

ಮುಂಬೈ :  ಖ್ಯಾತ ನಟಿ, ರಂಗಕರ್ಮಿ ಹಾಗೂ ಕಾಂಗ್ರೆಸ್ ನಾಯಕಿ ನಫೀಸಾ ಅಲಿ, ತಾವು ಮೂರನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಇನ್‌ಸ್ಟಾಗ್ರಾಂ ಮೂಲಕ ಪ್ರಕಟಿಸಿದ್ದಾರೆ. 

ಪೆರಿಟೋನಿಯಲ್ ಮತ್ತು ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. 

ಶನಿವಾರ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಅಲ್ಲದೇ ಸೋನಿಯಾ ಗಾಂಧಿ ಅವರೊಂದಿಗಿನ ಫೋಟೊ ಒಂದನ್ನು ಹಂಚಿಕೊಂಡಿದ್ದು ತಪಾಸಣೆಗೆ ತೆರಳುವ ಮುನ್ನ ಈ ಚಿತ್ರ ತೆಗೆದಿದ್ದು, ತಮ್ಮ ಆಪ್ತ ಗೆಳತಿಯ ತಮಗೆ ವಿಶ್ ಮಾಡಿದ್ದಾಗಿ 61 ವರ್ಷದ ನಫಿಸಾ ಕ್ಯಾಪ್ಶನ್ ನೀಡಿದ್ದಾರೆ. 

ಇನ್ನೊಂದು ಕುಟುಂಬದೊಂದಿಗಿನ ಫೋಟೊ ಹಂಚಿಕೊಂಡಿರುವ ನಫೀಸಾ ಅವರು ಕುಟುಂಬದ ಬಗೆಗಿನ ಆಪ್ತತತೆಯನ್ನು ಅದರಲ್ಲಿ ಬಿಚ್ಚಿಟ್ಟಿದ್ದಾರೆ. 

ನಫೀಸಾ ಅವರು ಬಾಲಿವುಡ್ ಖ್ಯಾತ ನಟಿಯಾಗಿದ್ದು, ಕಾಂಗ್ರೆಸ್ ನಾಯಕಿಯೂ ಆಗಿದ್ದಾರೆ.

ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ಹಲವು ಕ್ಷೇತ್ರಗಳಲ್ಲಿ ನಫೀಸಾ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರಮಟ್ಟದ ಸ್ವಿಮ್ಮರ್ ಕೂಡ ಆಗಿರುವ ಅವರು 1972 ರಿಂದ 1974 ರವರೆಗೂ ಚಾಂಪಿಯನ್ ಆಗಿದ್ದರು. ಅಲ್ಲದೇ 1976ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕೂಡ ಆಗಿರುವ ಮಿಸ್ ಇಂಟರ್ ನ್ಯಾಷನಲ್ ಗೂ ಕೂಡ ಭಾರತವನ್ನು ಪ್ರತಿನಿಧಿಸಿದ್ದರು. 

View post on Instagram
View post on Instagram