ದಕ್ಷಿಣ ಭಾರತದಲ್ಲಿ ಮತ್ತೇ ಅಧಿಕಾರಕ್ಕೇರುವ ಕನಸನ್ನು ಬಿಜೆಪಿ ಕಾಣ್ತಿದೆ. ಅದು ಕರ್ನಾಟಕದಿಂದಲೇ ಶುರು ಮಾಡ್ಬೇಕು ಅನ್ನೋ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ತಂತ್ರ ರೂಪಿಸುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ, ಮಿಷನ್ 150 ಗುರಿ ಇಟ್ಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಆದರೆ ಬಿಜೆಪಿಯ ಬಯಕೆಗೆ ಬ್ರೇಕ್ ಹಾಕೋದರ ಬಗ್ಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡ್ತಿದೆ.
ಬೆಂಗಳೂರು(ಮೇ.11): ಯಾವುದೇ ಕಾರಣಕ್ಕೂ ಕರ್ನಾಟಕವನ್ನ ಬಿಜೆಪಿಗೆ ಬಿಟ್ಟುಕೊಡಬಾರದು ಅನ್ನೋ ಹಠಕ್ಕೆ ಕಾಂಗ್ರೆಸ್ ಬಿದ್ದಿದೆ. ಆ ನಿಟ್ಟಿನಲ್ಲಿ ನೂತನ ಉಸ್ತುವಾರಿ ವೇಣುಗೋಪಾಲ ಬಿಜೆಪಿಗೆ ತಿರುಗೇಟು ನೀಡಲು ಕೆಲ ತಂತ್ರಗಳನ್ನು ಹೆಣೆದಿದ್ದಾರೆ.
ದಕ್ಷಿಣ ಭಾರತದಲ್ಲಿ ಮತ್ತೇ ಅಧಿಕಾರಕ್ಕೇರುವ ಕನಸನ್ನು ಬಿಜೆಪಿ ಕಾಣ್ತಿದೆ. ಅದು ಕರ್ನಾಟಕದಿಂದಲೇ ಶುರು ಮಾಡ್ಬೇಕು ಅನ್ನೋ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ತಂತ್ರ ರೂಪಿಸುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ, ಮಿಷನ್ 150 ಗುರಿ ಇಟ್ಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಆದರೆ ಬಿಜೆಪಿಯ ಬಯಕೆಗೆ ಬ್ರೇಕ್ ಹಾಕೋದರ ಬಗ್ಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡ್ತಿದೆ.
ಕಳೆದ ಮೂರು ದಿನಗಳಿಂದ ರಾಜ್ಯ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ ವೇಣುಗೋಪಾಲ್'ಗೆ ಅತೃಪ್ತರ ಮನವೊಲಿಸಿ ಪಕ್ಷ ಸಂಘಟನೆಯ ವೇಗ ಹೆಚ್ಚಿಸುವ ದೊಡ್ಡ ಜವಾಬ್ದಾರಿ ಇದೆ. ಇದಕ್ಕಾಗಿ ಬೆಂಗಳೂರಲ್ಲೇ ಮನೆ ಮಾಡಲಿದ್ದಾರೆ ಎನ್ನಲಾಗಿದೆ. ನಾಲ್ವರು ಉಸ್ತುವಾರಿ ಕಾರ್ಯದರ್ಶಿಗಳು ಕೂಡ ರಾಜ್ಯದಲ್ಲೆ ಠೀಕಾಣಿ ಹೂಡಲಿದ್ದಾರೆ ಎನ್ನಲಾಗ್ತಿದೆ.
ವೇಣುಗೋಪಾಲ್ತಂತ್ರಗಳು
- ಪಕ್ಷದ ಮೇಲೆ ವಿಶ್ವಾಸ ಮೂಡುವಂತೆ ಮಾಡುವುದು
- ಮುಖಂಡರು ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸುವುದು
- ಜೊತೆಗೆ ಲಿಂಗಾಯತ, ಒಕ್ಕಲಿಗ ಮತಗಳನ್ನು ಸೆಳೆಯಲು ಪ್ಲಾನ್
- ಜಾತಿಯ ಮುಖಂಡರಿಗೆ ಸ್ಥಳೀಯ ಮಟ್ಟದಲಿ ಪಕ್ಷದ ಜವಾಬ್ದಾರಿ
- ನೊಂದಣಿಯನ್ನು ತೀವ್ರಗೊಳಿಸುವುದು
- ವತಿಯಿಂದ ಸಮಾವೇಶಗಳನ್ನು ಆಯೋಜಿಸುವುದು
- ಪಕ್ಷದತ್ತ ಸೆಳೆಯಲು ಕಾರ್ಯಕ್ರಮ ರೂಪಿಸುವುದು
- ಸಚಿವರು ಜಿಲ್ಲೆಯಲ್ಲೇ ಇದ್ದುಕೊಂಡು ಪಕ್ಷ ಸಂಘಟಿಸುವುದು
- ಕಂದಾಯ ವಿಭಾಗಗಳಿಗೂ ಒರ್ವ ಎಐಸಿಸಿ ಕಾರ್ಯದರ್ಶಿ ನೇಮಕ
- ವಿಭಾಗದ ಹೆಡ್ ಕ್ವಾಟರ್ ನಲ್ಲೇ ನೆಲೆಸುವುದು
ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ ಪಕ್ಷ ಸಂಘಟನೆ ಚುರುಕುಗೊಳಿಸುವುದು. ಕಳೆದ ಮೂರು ದಿನಗಳಿಂದ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಯಿಂದ ಕಾರ್ಯಕರ್ತರು ಖುಷಿಯಾಗಿದ್ದಾರೆ.ಈ ಟೆಂಪೋವನ್ನು ಕಾಯ್ದುಕೊಂಡು ಹೋಗುವುದು. ಒಟ್ಟಿನಲ್ಲಿ ಮೋದಿ ಅಲೆಗೆ ಬ್ರೇಕ್ ಹಾಕಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವಂತೆ ಮಾಡುವುದು ವೇಣುಗೋಪಾಲ್ ಉದ್ದೇಶವಾಗಿದೆ.