ರಾಜ್ಯಸಭೆಯ ಸಭಾಪತಿಯಾಗಿ ಮೊದಲ ದಿನ ಕಲಾಪಕ್ಕೆ ಹಾಜರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಸದನದಲ್ಲಿ ಎರಡು ಹೊಸ ಸಂಪ್ರದಾಯಗಳ ದಾಖಲೆ ಬರೆದರು.

ನವದೆಹಲಿ (ಡಿ.16): ರಾಜ್ಯಸಭೆಯ ಸಭಾಪತಿಯಾಗಿ ಮೊದಲ ದಿನ ಕಲಾಪಕ್ಕೆ ಹಾಜರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಸದನದಲ್ಲಿ ಎರಡು ಹೊಸ ಸಂಪ್ರದಾಯಗಳ ದಾಖಲೆ ಬರೆದರು. ಮೊದಲನೆಯದಾಗಿ, ಸದಸ್ಯರು ತಮ್ಮ ಪೇಪರ್ಗಳನ್ನು ಸಭಾಪತಿ ಪೀಠಕ್ಕೆ ಸಲ್ಲಿಸುವಾಗ, `ನಾನು ಬೇಡುತ್ತಿದ್ದೇನೆ' ಎಂಬ ಪದ ಬಳಕೆ ಕೈಬಿಡುವಂತೆ ಸೂಚಿಸಿ ವಸಾಹತುಶಾಹಿ ಆಡಳಿತ ಸಂಪ್ರದಾಯ ಕೈಬಿಡುವುದಕ್ಕೆ ಚಾಲನೆ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೊಂದು, ದಿವಂಗತರಾದ ಗಣ್ಯರಿಗೆ ಶ್ರದ್ಧಾಂಜಲಿ ಟಿಪ್ಪಣಿ ಓದಿ ಹೇಳುವಾಗ ಎದ್ದು ನಿಂತು ಓದಿದರು. ಪೇಪರ್ ಸಲ್ಲಿಸುವಾಗ ಸದಸ್ಯರು `ನಾನು ಬೇಡುತ್ತಿದ್ದೇನೆ' ಎಂಬುದರ ಬದಲು, `ನಾನು ಮೇಜಿನ ಮೇಲೆ ಇಡಲು ಇಚ್ಛಿಸುತ್ತೇನೆ' ಎಂದು ಹೇಳುವಂತೆ ಸಲಹೆ ನೀಡಿದರು. ಆದಾಗ್ಯೂ, ಇದೊಂದು ಆದೇಶ ಅಲ್ಲ, ಸಲಹೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.