ಉತ್ತಮ ಮಳೆ ಕೆಲ ತರಕಾರಿಗಳು ಅಗ್ಗ

news | Monday, June 4th, 2018
Suvarna Web Desk
Highlights

ಕೆಲ ದಿನಗಳಿಂದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದ ಬಹುತೇಕ ತರಕಾರಿಗಳು ಅಗ್ಗವಾಗಿ ಮಾರಾಟ ವಾಗುತ್ತಿವೆ.  .ಆರ್.ಮಾರು ಕಟ್ಟೆಯಲ್ಲಿ ಬದನೆ ಕಾಯಿ, ಬೆಂಡೆಕಾಯಿ, ಸೀಮೆಬದನೆ, ನವಿಲುಕೋಸು, ಕ್ಯಾರೆಟ್, ಬೀಟ್‌ರೂಟ್, ಮೂಲಂಗಿ, ಹೀರೆಕಾಯಿ, ಆಲೂಗಡ್ಡೆ, ಪಡವಲ ಕಾಯಿ ದರಗಳು ಪ್ರತಿ ಕೆಜಿ 20-30 ರ ಆಸುಪಾಸಿ ನಲ್ಲಿದ್ದವು. ಈಗ ಅವುಗಳ ದರಗಳು ಈಗ 10ರಿಂದ 20ಕ್ಕೆ ಇಳಿಕೆಯಾಗಿದೆ.

ಬೆಂಗಳೂರು : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ತರಕಾರಿ ದರದ ಮೇಲೆ ಪರಿಣಾಮ ಬೀರಿದೆ. ಮಳೆ ಕೊರತೆ, ಇಳುವರಿ ಕುಸಿತ ಕಂಡಿದ್ದ ರೈತರು ಮುಂಗಾರು ಮಳೆಯಿಂದ ಸಂತಸಗೊಂಡಿದ್ದರೆ, ಇನ್ನೊಂದೆಡೆ ತಾವು ಬೆಳೆದ ಬೆಳೆಗೆ ಮಳೆ ಕಂಟಕವಾಗುವ ಆತಂಕವನ್ನೂ ಎದುರಿಸುತ್ತಿದ್ದಾರೆ.

ಕೆಲ ದಿನಗಳಿಂದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದ ಬಹುತೇಕ ತರಕಾರಿಗಳು ಅಗ್ಗವಾಗಿ ಮಾರಾಟ ವಾಗುತ್ತಿವೆ.  .ಆರ್.ಮಾರು ಕಟ್ಟೆಯಲ್ಲಿ ಬದನೆ ಕಾಯಿ, ಬೆಂಡೆಕಾಯಿ, ಸೀಮೆಬದನೆ, ನವಿಲುಕೋಸು, ಕ್ಯಾರೆಟ್, ಬೀಟ್‌ರೂಟ್, ಮೂಲಂಗಿ, ಹೀರೆಕಾಯಿ, 
ಆಲೂಗಡ್ಡೆ, ಪಡವಲ ಕಾಯಿ ದರಗಳು ಪ್ರತಿ ಕೆಜಿ 20-30 ರ ಆಸುಪಾಸಿ ನಲ್ಲಿದ್ದವು. ಈಗ ಅವುಗಳ ದರಗಳು ಈಗ 10ರಿಂದ 20ಕ್ಕೆ ಇಳಿಕೆಯಾಗಿದೆ.

ಎಲೆಕೋಸು 1 ಕ್ಕೆ 10, ಹೂಕೋಸು ೧ಕ್ಕೆ 20ಕ್ಕೆ ಮಾರಾಟವಾಗುತ್ತಿವೆ. ಆದರೆ, ಬಟಾಣೆ, ಡಬಲ್ ಬೀನ್ಸ್ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರ ಗಡಿ ದಾಡಿವೆ. ಇಪ್ಪತ್ತು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಗೆ 7-8ಕ್ಕೆ ಖರೀದಿಯಾಗುತ್ತಿದ್ದ ಟೊಮೊಟೋ ಕೆ.ಜಿ.ಗೆ 10 ಕ್ಕೆ ಮಾರಾಟಗೊಳ್ಳುತ್ತಿದೆ.

ಕೆ.ಆರ್.ಮಾರುಕಟ್ಟೆಗೆ ರಾಜ್ಯದ ವಿವಿಧೆಡೆಯಿಂದ ನಿಗದಿತ ಪ್ರಮಾಣದಲ್ಲಿ ತರಕಾರಿ ಸರಬರಾಜಾಗುತ್ತಿದೆ. ಇಳುವರಿ ಉತ್ತಮವಾಗಿದ್ದು, ದರಗಳು ಇಳಿಕೆಯಾ ಗಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವು ಪ್ರದೇಶಕ್ಕೂ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ತರಕಾರಿಗಳು ಪೂರೈಕೆ ಆಗುತ್ತವೆ. ನಿರೀಕ್ಷೆಗೂ  ಮೀರಿ ಮಳೆ ಸುರಿದರೆ ಸೊಪ್ಪು, ತರಕಾರಿ ಬೆಳೆ ನೆಲಕಚ್ಚುವ ಸಂಭವವಿದೆ. ಅಲ್ಲದೆ ಮಳೆಯಿಂದ ಹುಳು ಭಾದೆ, ವಿವಿಧ ರೋಗಗಳಿಗೂ ಬೆಳೆ ತುತ್ತಾಗಲಿದೆ. 

ಇದರಿಂದ ಪುನಃ ಬೆಲೆ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು. ಈರುಳ್ಳಿ ಇಳುವರಿ ಉತ್ತಮ: ಕೆಲವು ದಿನಗಳ ಹಿಂದೆ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಕಂಗೆಡಿಸಿದ್ದ ಈರುಳ್ಳಿ 100ಗೆ 6 ಕೆ.ಜಿ. ಮಾರಾಟವಾಗುತ್ತಿದೆ. ಮಹಾರಾಷ್ಟ್ರ ಹಾಗೂ  ಆಂಧ್ರ ದಲ್ಲಿ ಈರುಳ್ಳಿ ಕೆ.ಜಿ.ಗೆ 10ರಿಂದ 15  ಒಳಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಕಡಿಮೆ ಇದೆ.

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Sujatha NR