ಹಂಪಿ ವಿವಿಯ ಉಪಕುಲಪತಿಗಳಾಗಿರುವ ಮಲ್ಲಿಕಾ ಘಂಟಿ ಯಾಕೆ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ, ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಕೊಡೋದು ಸರಿ ಅಲ್ಲ, ನಾನು ಅವರಿಂದ ಈ ಬಗ್ಗೆ ಸ್ಪಷ್ಟೀಕರಣ ಕೇಳುತ್ತೇನೆ, ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಬೆಂಗಳೂರು: ಹಂಪಿ ವಿವಿಯ ಉಪಕುಲಪತಿಗಳಾಗಿರುವ ಮಲ್ಲಿಕಾ ಘಂಟಿ ಯಾಕೆ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ, ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಕೊಡೋದು ಸರಿ ಅಲ್ಲ, ನಾನು ಅವರಿಂದ ಈ ಬಗ್ಗೆ ಸ್ಪಷ್ಟೀಕರಣ ಕೇಳುತ್ತೇನೆ, ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಹಂಪಿ ವಿವಿಗೂ ರಾಜ್ಯ ಸರ್ಕಾರದ ಸಚಿವಾಲಯಕ್ಕೂ ಯಾವುದೇ ಸಂಬಂಧ ಇಲ್ಲ, ಹೀಗಿರುವಾಗ ಯಾಕೆ ಹೀಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಅವರಿಂದ ಸ್ಪಷ್ಟನೆ ಪಡೆಯುವೆ, ಈ ಹೇಳಿಕೆಯ ಹಿನ್ನಲೆಯಲ್ಲಿ ಮಲ್ಲಿಕಾ ಘಂಟಿ ವಿರುದ್ಧ ಕ್ರಮ ಕೈಗೊಳ್ಳುವೆ, ಎಂದು ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಂಪಿ ವಿವಿಗೆ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದ್ದಾರೆ. ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಮುಕ್ತ ವಿವಿ ಸಮಸ್ಯೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದ್ದೇವೆ. ಕೇಂದ್ರ ಸಚಿವ ಜಾವಡೇಕರ್ ಬಳಿ ಯುಜಿಸಿ ಮಾನ್ಯತೆಗೂ ಮನವಿ ಮಾಡಿದ್ದೇವೆ. ಉಪಕುಲಪತಿಗಳಾಗಿ ಕೆಲಸ ಮಾಡುವವರು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಸಮಸ್ಯೆ ಆಗುತ್ತೆ. ವಿವಿಗಳ ಮೇಲೆ ಕ್ರಮ ವಹಿಸುವ ಅಧಿಕಾರ ನಮಗಿಲ್ಲ. ರಾಜ್ಯಪಾಲರೇ ಕ್ರಮವಹಿಸಬೇಕಾಗುತ್ತೆ. ಯೂನಿವರ್ಸಿಟಿಗಳ ಸಂಪೂರ್ಣ ಅಧಿಕಾರ ರಾಜ್ಯಪಾಲರ ವ್ಯಾಪ್ತಿಯಲ್ಲಿದೆ, ಸಚಿವರಿಗೆ ಅಧಿಕಾರ ಇಲ್ಲ ಎಂದು ಅವರು ಹೇಳಿದ್ದಾರೆ.
ಸಿಎಂ ನೀಡುವ ಭರವಸೆ ಒಂದೇ ದಿನಕ್ಕೆ ಮಾತ್ರ ಸೀಮಿತ. ಸೂಟ್ಕೇಸ್ ಇಲ್ಲ ಅಂದ್ರೆ ವಿಶ್ವ ವಿದ್ಯಾಲಯಗಳ ಅಭಿವೃದ್ಧಿ ಆಗಲ್ಲ ಎಂದು ಕನ್ನಡ ವಿವಿ ಉಪಕುಲಪತಿ ಮಲ್ಲಿಕಾಘಂಟಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
