3ರಿಂದ 4 ಲಕ್ಷಕ್ಕೂ ಅಧಿಕ ಜನ ಸೇರದಿದ್ದರೆ ಪಕ್ಷ ರಚನೆ ಕೈ ಬಿಡಲಾಗುವುದು

ಯಾದಗಿರಿ(ಡಿ.08): ಜನ ಬೆಂಬಲ ಇಲ್ಲದಿದ್ದರೆ ‘ನಮ್ಮ ಕಾಂಗ್ರೆಸ್ ಪಕ್ಷ’ ಸ್ಥಾಪನೆ ಕೈಬಿಡುವುದಾಗಿ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಹೇಳಿದರು.

ನಗರದಲ್ಲಿ ‘ನಮ್ಮ ಕಾಂಗ್ರೆಸ್ ಪಕ್ಷ’ ಸ್ಥಾಪನೆ ವಿಚಾರವಾಗಿ ಗುರು ವಾರ ನಡೆದ ಸಿದ್ಧತಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಡಿ.19ರಂದು ಕೂಡಲಸಂಗಮದಲ್ಲಿ ಅದ್ಧೂರಿಯಾಗಿ ಬೃಹತ್ ಸಮಾವೇಶ ನಡೆಸಲಾ ಗುತ್ತಿದ್ದು, 3ರಿಂದ 4 ಲಕ್ಷಕ್ಕೂ ಅಧಿಕ ಜನ ಸೇರದಿದ್ದರೆ ಪಕ್ಷ ರಚನೆ ಕೈ ಬಿಡಲಾಗುವುದು. ನಿರೀಕ್ಷೆಗೂ ಮೀರಿ ಜನ ಬಂದರೆ ಹೊಸ ಪಕ್ಷ ಘೋಷಣೆ ಎಂದು ಸ್ಪಷ್ಟಪಡಿಸಿದರು.