ಎಚ್ ಡಿಕೆ ಟೀಂಗೆ ವಾಟಾಳ್ ಸೇರ್ಪಡೆ ?

ಕನ್ನಡ ಪರ ಹೋರಾಟಗಾರ ಎನಿಸಿಕೊಂಡಿರುವ ವಾಟಾಳ್ ನಾಗರಾಜ್ ಅವರ ನಡೆ ಇದೀಗ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದು, ಎಚ್ ಡಿಕೆ ಟೀಂಗೆ ವಾಟಾಳ್ ಸೇರ್ಪಡೆಯಾಗುವ ವದಂತಿ ಹರಡಿದೆ. 

Vatal Nagaraj Not To Contest Ramanagara By Poll

ರಾಮನಗರ :  ಅನಿವಾರ್ಯ ಕಾರಣಗಳಿಂದ ಕನ್ನಡ ಚಳುವಳಿ ಹೋರಾಟ ಗಾರ ವಾಟಾಳ್ ನಾಗರಾಜ್ ಅವರು ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ನಿರ್ಧಾರ ದಿಂದ ಹಿಂದೆ ಸರಿದಿದ್ದಾರೆ. 

ವಾಟಾಳ್ ನಾಗರಾಜ್ ಅವರ ಸ್ಪರ್ಧೆಗೆ ಜಿಲ್ಲೆಯ ಕೆಲವು ಕನ್ನಡಪರ ಸಂಘಟನೆಗಳ ಮುಖಂಡರು  ಆಹ್ವಾನಿಸಿದ್ದರು. ಈ ನಿಟ್ಟಿನಲ್ಲಿ ರಾಮನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ ಸೋಮವಾರ ರಾತ್ರಿ 11 ಗಂಟೆಯ ನಂತರ ನಾಮಪತ್ರ ಸಲ್ಲಿಕೆ ಕೈ ಬಿಟ್ಟಿದ್ದಾರೆ. 

ಇದೀಗ ವಾಟಾಳ್ ಅವರ ದಿಢೀರ್ ನಿರ್ಧಾರದಿಂದ ಕನ್ನಡಪರ ಸಂಘಟನೆಗಳ ಮುಖಂಡರು ಅಚ್ಚರಿಗೊಳಗಾಗಿದ್ದಾರೆ.  

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಎಂಎಲ್ ಸಿ ಹುದ್ದೆ  ಅಮಿಷ ಬಂದಿರುವ ವದಂತಿ ಇದ್ದು, ಈ ನಿಟ್ಟಿನಲ್ಲಿ ಸ್ಪರ್ಧೆಯಿಂದ  ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. 

Latest Videos
Follow Us:
Download App:
  • android
  • ios