ಎಲೆಕ್ಷನ್‌ ಭೀತಿ, ರಾಜಸ್ಥಾನ ರೈತರ 50000 ರು. ಬೆಳೆ ಸಾಲ ಮನ್ನಾಕ್ಕೆ ನಿರ್ಧಾರ

Vasundhara Raje govt offers farm loan waiver
Highlights

ಇದೇ ವರ್ಷ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದಲ್ಲಿ, ರೈತರ ಓಲೈಕೆಗೆ ಮುಂದಾಗಿರುವ ವಸುಂಧರಾ ರಾಜೇ ಸರ್ಕಾರ, ರಾಜ್ಯದ ಸಣ್ಣ ಮತ್ತು ಮಧ್ಯಮ ರೈತರ 50,000 ರು.ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

ಜೈಪುರ: ಇದೇ ವರ್ಷ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದಲ್ಲಿ, ರೈತರ ಓಲೈಕೆಗೆ ಮುಂದಾಗಿರುವ ವಸುಂಧರಾ ರಾಜೇ ಸರ್ಕಾರ, ರಾಜ್ಯದ ಸಣ್ಣ ಮತ್ತು ಮಧ್ಯಮ ರೈತರ 50,000 ರು.ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಲಾದ ಸಾಲಗಳಲ್ಲಿ ಮಿತಿಮೀರಿದ ಮತ್ತು ಬಾಕಿಯುಳಿದಿರುವ ವಿಭಾಗದ ಅಲ್ಪಾವಧಿ ಸಾಲಗಳಲ್ಲಿನ ಏಕ ಬೆಳೆ ಸಾಲ ಮನ್ನಾ ಮಾಡಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 8,000 ಕೋಟಿ ರು. ಹೊರೆಯಾಗಲಿದೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ಎರಡು ಲೋಕಸಭಾ ಮತ್ತು ಒಂದು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು.

 

loader