. ‘ಪ್ರತಿಯೊಬ್ಬ ಮಹಿಳೆಯೂ ಸನ್ನಿ ಲಿಯೋನ್ ರೀತಿ ಪುರುಷರನ್ನು ಹೇಗೆ ಸಂತೋಷವಾಗಿಡಬೇಕೆಂಬುದನ್ನು ಕಲಿಯಬೇಕು’

ಮುಂಬೈ(ಮಾ.08): ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಾಡಿದ ಟ್ವೀಟ್ ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಜೊತೆಗೆ ಅವರ ವಿರುದ್ಧ ಗೋವಾದಲ್ಲಿ ಕೇಸು ಕೂಡಾ ದಾಖಲಾಗಿದೆ. ‘ಪ್ರತಿಯೊಬ್ಬ ಮಹಿಳೆಯೂ ಸನ್ನಿ ಲಿಯೋನ್ ರೀತಿ ಪುರುಷರನ್ನು ಹೇಗೆ ಸಂತೋಷವಾಗಿಡಬೇಕೆಂಬುದನ್ನು ಕಲಿಯಬೇಕು’ ಎಂದು ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ವರ್ಮಾ ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇಂಥ ಕೀಳು ಹೇಳಿಕೆ ನೀಡಿದ್ದಾಗಿ ಜನ ಅವರನ್ನು ಹಿಗ್ಗಾಮುಗ್ಗಾ ಬೈದಿದ್ದಾರೆ. ಮತ್ತೊಂದೆಡೆ ವರ್ಮಾ ಟ್ವೀಟ್‌ನಲ್ಲಿ ಬಳಸಿದ್ದ ವಾಕ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಗೋವಾದ ಸಾಮಾಜಿಕ ಕಾರ್ಯಕರ್ತೆ ವಿಶಾಖ ಮಾಂಬ್ರೆ ಎಂಬವರು ದೂರು ದಾಖಲಿಸಿದ್ದಾರೆ.