ಇಂದು [ಮಂಗಳವಾರ] ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಮಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಕ್ ಹೈಡ್ರಾಮಾ ಸೃಷ್ಟಿಸಿದ್ದಾರೆ.
ನವದೆಹಲಿ, [ಜೂ.18]: ವಂದೇ ಮಾತರಂ ಇಸ್ಲಾಂಗೆ ವಿರುದ್ಧವಾಗಿದ್ದು, ನಾವು ಅದನ್ನು ಅನುಸರಿಸುವುದಿಲ್ಲ ಎಂದು ಸಂಸತ್‌ನಲ್ಲಿ ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರೆಹಮಾನ್ ಬರ್ಕ್ ಹೇಳಿದ್ದಾರೆ.
ಮಂಗಳವಾರ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದ ವೇಳೆ ಆಡಳಿತ ಪಕ್ಷದ ಕೆಲ ಸದಸ್ಯರು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಘೋಷಣೆಗಳ ನಡುವೆಯೇ ಪ್ರಮಾಣ ಸ್ವೀಕರಿಸಿದ ಶಫಿಕುರ್ ರೆಹಮಾನ್ ವಂದೇ ಮಾತರಂ ಇಸ್ಲಾಂಗೆ ವಿರುದ್ಧ ನಾವು ಅದನ್ನು ಅನುಸರಿಸುವುದಿಲ್ಲ ಎಂದು ಹೇಳಿ ಕಾನ್‌ಸ್ಟಿಟ್ಯೂಶನ್ ಆಫ್ ಇಂಡಿಯಾ ಜಿಂದಾಬಾದ್ ಎಂದರು.
ಸಂಸತ್‌ನಲ್ಲಿ ಶಫಿಕರ್ ಮಾತನ್ನು ಹಲವರು ವಿರೋಧಿಸಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದರು. ಆದರೂ ಕೂಡ ಶಫಿಕರ್ ವಂದೇ ಮಾತರಂ ಹೇಳದೇ, ಕ್ಷಮೆಯೂ ಕೇಳದೆ ನಡೆದಿದ್ದಾರೆ.ಈ ರೀತಿ ಮಾಡಿದ್ದು ಇದೇನು ಮೊದಲಲ್ಲ.
ಈ ಹಿಂದೆಯೂ ವಂದೇ ಮಾತರಂ ಹಾಡುತ್ತಿದ್ದಾಗ ಸಭಾತ್ಯಾಗ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ‘ವಂದೇ ಮಾತರಂ’ ಹಾಡುವುದನ್ನು ವಿರೋಧಿಸಿ ಸಂಸತ್ ಕಲಾಪಕ್ಕೆ ಗೈರಾಗಿದ್ದು ಉಂಟು.
