ಅರಸೀಕೆರೆಯಲ್ಲಿ ವಿ. ಸೋಮಣ್ಣ ಪುತ್ರಗೆ ಬಿಜೆಪಿ ಟಿಕೆಟ್

First Published 9, Mar 2018, 1:28 PM IST
V Somanna Son Contest Election
Highlights

ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪುತ್ರ ಡಾ.ಅರುಣ್ ಸೋಮಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯ ಹಿರಿಯ ನಾಯಕ ತಮ್ಮ ಪುತ್ರನ ರಾಜಕೀಯ ಪದಾರ್ಪಣೆಗೆ ವೇದಿಕೆ ಸಜ್ಜುಗೊಳಿಸಲು ಮುಂದಾಗಿದ್ದಾರೆ.

ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪುತ್ರ ಡಾ.ಅರುಣ್ ಸೋಮಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯ ಹಿರಿಯ ನಾಯಕ ತಮ್ಮ ಪುತ್ರನ ರಾಜಕೀಯ ಪದಾರ್ಪಣೆಗೆ ವೇದಿಕೆ ಸಜ್ಜುಗೊಳಿಸಲು ಮುಂದಾಗಿದ್ದಾರೆ.

ಅರಸೀಕೆರೆಯಲ್ಲಿ ಗುರುವಾರ ನಡೆದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅರುಣ್ ಸ್ಪರ್ಧೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಗ್ರೀನ್ ಸಿಗ್ನಲ್ ನೀಡಿರುವುದಾಗಿ ತಿಳಿಸಿದರು.

ಇದು ಯಡಿಯೂರಪ್ಪನವರೇ ತೆಗೆದುಕೊಂಡ ತೀರ್ಮಾನವಾಗಿದ್ದು ನನ್ನ ಪುತ್ರನಿಗೆ ಅರಸೀಕೆರೆ ಜನ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಡಾಕ್ಟರ್ ಓದಿರೋ ಮಗನನ್ನು ಬೆಂಗಳೂರು ಅಥವಾ ಚಾಮರಾಜ ನಗರದಲ್ಲಿ ಬೆಳೆಸುವ ಬಯಕೆ ನನಗಿತ್ತು. ಇಂದಿನಿಂದಲೇ ಕ್ಷೇತ್ರ ಸಂಚಾರ ಆರಂಭಿಸಲಿದ್ದೇನೆ ಎಂದರು.

loader