ಉತ್ತರಾಖಂಡ್ ಡೆಹ್ರಾಡೂನ್’ನ ಮದರಸಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೊಟೊಗಳನ್ನು ಹಾಕಲು ನಿರಾಕರಿಸಲಾಗಿದೆ.

ಡೆಹ್ರಾಡೂನ್ (ಜ.05): ಉತ್ತರಾಖಂಡ್ ಡೆಹ್ರಾಡೂನ್’ನ ಮದರಸಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೊಟೊಗಳನ್ನು ಹಾಕಲು ನಿರಾಕರಿಸಲಾಗಿದೆ.

ಧಾರ್ಮಿಕ ವಿಚಾರಧಾರೆಗಳ ಆಧಾರದ ಮೇಲೆ ಉತ್ತರಾಖಂಡ್ ಮದರಸಾ ಎಜುಕೇಶನ್ ಬೋರ್ಡ್ ಈ ಆದೇಶವನ್ನು ಹೊರಡಿಸಿದೆ. ಯಾವುದೇ ಮುಸ್ಲಿಂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಿ ಅವರ ಫೊಟೋಗಳನ್ನು ಹಾಕಬಾರದು ಎಂದು ಆದೇಶ ಹೊರಡಿಸಲಾಗಿದೆ.

ಆದರೆ ಈ ಬಗ್ಗೆ ಇನ್ನೋರ್ವ ಮದರಸಾದ ಶಿಕ್ಷಕರು ಹೇಳಿಕೆ ನೀಡಿರುವಂತೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ನಾಯಕರ ಫೊಟೋಗಳನ್ನು ಹಾಕಬಾರದು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.