Asianet Suvarna News Asianet Suvarna News

ಭರ್ಜರಿ 2 ಲಕ್ಷ ಉದ್ಯೋಗವಕಾಶ

ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು ಇದರಿಂದ 2 ಲಕ್ಷದಷ್ಟು ಉದ್ಯೋಗಗಳು ರಾಜ್ಯದಲ್ಲಿ ಸೃಷ್ಟಿಯಾಗಲಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

Uttar Pradesh will be Indias new growth engine says Yogi Adityanath
Author
Bengaluru, First Published Jul 30, 2018, 12:15 PM IST

ಲಕ್ನೋ :  ಪ್ರಧಾನಿ ನರೇಂದ್ರ ಮೋದಿ   ನೇತೃತ್ವದ ಕೇಂದ್ರ ಸರ್ಕಾರ  ಉತ್ತರ ಪ್ರದೇಶದಲ್ಲಿ 60 ಸಾವಿರ ಕೋಟಿ ವೆಚ್ಚದ 81 ಯೋಜನೆಗಳಿಗೆ ಚಾಲನೆ ನೀಡಿದ್ದು ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ದೊರಕಲಿವೆ. 

ಈ ಯೋಜನೆಗಳಿಂದ ಉತ್ತರ ಪ್ರದೇಶ ದೇಶದ ಅಭಿವೃದ್ಧಿ ಇಂಜಿನ್ ಆಗಿ ಪರಿವರ್ತಿತವಾಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ಯೋಜನೆಗಳಿಂದಾಗಿ ರಾಜ್ಯದಲ್ಲಿ  ಒಟ್ಟು 2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ. 

ಉತ್ತರ ಪ್ರದೇಶ ಶೀಘ್ರ ಅಭಿವೃದ್ಧಿ ಸಾಧಿಸಲು ಈ ಯೋಜನೆಗಳು ಅನುಕೂಲಕಾರಿಯಾಗಲಿವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಅಲ್ಲದೇ ಈ ಹಿಂದೆ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಐದು ವರ್ಷಗಳಲ್ಲಿ ಈ ಹಿಂದಿನ ಸರ್ಕಾರ ಮಾಡದ ಕಾರ್ಯವನ್ನು ತಮ್ಮ ಸರ್ಕಾರ  5 ತಿಂಗಳಲ್ಲಿಯೇ ಸಾಧಿಸಿದ್ದಾಗಿ ಹೇಳಿದ್ದರು.

Follow Us:
Download App:
  • android
  • ios