Asianet Suvarna News Asianet Suvarna News

ಆತಂಕಕ್ಕೆ ಕಾರಣವಾದ ಇಲಿಗಳನ್ನೇ ತಿನ್ನುವ ಸಮುದಾಯದ ಸರಣಿ ಸಾವು

ಹಲವು ಯೋಜನೆಗಳನ್ನು ಜಾರಿಗೆ ತಂದು ದೇಶದಲ್ಲಿ ಸರ್ಕಾರ ಬಡತನ ನಿವಾರಣೆ ಮಾಡಲು ಪ್ರಯತ್ನ ಮಾಡುತ್ತಿರುವ ಹೊರತಾಗಿಯೂ, ದೇಶದಲ್ಲಿ ಬಡತನ ಮಾತ್ರ ನಿವಾರಣೆಯಾಗಿಲ್ಲ.  ಉತ್ತರ ಪ್ರದೇಶದ ಮಹಾದಲಿತ ಸಮುದಾಯದಲ್ಲಿ ಹಸಿವಿನಿಂದ ಸರಣಿ ಸಂಭವಿಸುತ್ತಿದೆ.
 

Uttar Pradesh Rat Eating Musahar Battle Starvation
Author
Bengaluru, First Published Oct 9, 2018, 11:20 AM IST

ಕುಶಿನಗರ(ಉತ್ತರ ಪ್ರದೇಶ): ಬಡತನ ನಿವಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದ ಹೊರತಾಗಿಯೂ, ದೇಶದಲ್ಲಿ ಬಡತನ ಮಾತ್ರ ನಿವಾರಣೆಯಾಗಿಲ್ಲ. 

ಇದರ ಪರಿಣಾಮ ಇಲಿಗಳನ್ನೇ ಆಹಾರವಾಗಿ ನೆಚ್ಚಿಕೊಂಡಿದ್ದ ಮಹಾದಲಿತ ಸಮುದಾಯದವರು ಇದೀಗ ಆಹಾರವಿಲ್ಲದೆ ಸರಣಿ ಸಾವನ್ನಪ್ಪುತ್ತಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ಇತ್ತೀಚೆಗಷ್ಟೇ ಇಲ್ಲಿನ ರಕ್ಬಾ ದುಲ್ಮಾ ಪಟ್ಟಿಗ್ರಾಮದಲ್ಲಿ ವಾಸವಾಗಿದ್ದ ವೀರೇಂದ್ರ ಮುಸಾಹರ್‌ ಎಂಬಾತನ ಪತ್ನಿ, 6 ವರ್ಷದ ಮಗ ಮತ್ತು 2 ವರ್ಷದ ಮಗಳು ಹಸಿವಿನ ನರಳಾಟದಿಂದ ಸಾವನ್ನಪ್ಪಿದ್ದರು. ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಸರ್ಕಾರಿ ಅಧಿಕಾರಿಗಳು, ಯಾವುದೇ ಕುಟುಂಬಸ್ಥರು ಹಸಿವಿನಿಂದ ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios