Asianet Suvarna News Asianet Suvarna News

ಕುಟುಂಬ ರಾಜಕಾರಣದಿಂದ ಹೊರಬಂದು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲಿದ್ದಾರೆ ಡಿಂಪಲ್ ಯಾದವ್

ಉತ್ತರ ಪ್ರದೇಶವು ಕುಟುಂಬ ರಾಜಕಾರಣದ ಪ್ರತಿಷ್ಠೆ ಕಣವಾಗಿದ್ದು, ಡಿಂಪಲ್ ಯಾದವ್  ಅಪ್ಪ-ಮಗನ ಜಗಳದಿಂದ ಹೊರಗುಳಿದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳತ್ತಿವೆ.

Uttar Pradesh polls to see Dimple Yadav come out of family shadow

ನವದೆಹಲಿ (ಜ.14): ಉತ್ತರ ಪ್ರದೇಶವು ಕುಟುಂಬ ರಾಜಕಾರಣದ ಪ್ರತಿಷ್ಠೆ ಕಣವಾಗಿದ್ದು, ಡಿಂಪಲ್ ಯಾದವ್  ಅಪ್ಪ-ಮಗನ ಜಗಳದಿಂದ ಹೊರಗುಳಿದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳತ್ತಿವೆ.

ಎರಡನೇ ಬಾರಿ ಕನ್ನೂಜ್ ಕ್ಷೇತ್ರದಿಂದ ಸಂಸದೆಯಾಗಿರುವ ಡಿಂಪಲ್ ಯಾದವ್ ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ರಾಜ್ಯ ಚುನಾವಣೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಪತಿ ಅಖಿಲೇಶ್ ಯಾದವ್ ರ ಬೆಂಬಲವನ್ನು ಯಾಚಿಸಿದ್ದಾರೆ.

ಪಕ್ಷ ಮತ್ತು ಕುಟುಂಬ ರಾಜಕಾರಣದಲ್ಲಿ ಸಿಲುಕಿರುವ ಅಖಿಲೇಶ್ ಯಾದವ್ ಗೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ತಯಾರಿ ನಡೆಸಲಾಗುತ್ತಿದೆ ಎಂದು ಡಿಂಪಲ್ ಗೌಪ್ಯವಾಗಿ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಸ್ ಪಿ ಮುಖ್ಯಸ್ಥ ಮುಲಾಯಂ ಸಿಂಗ್ ವಿರೋಧಿಸಿದ ಬೆನ್ನಲ್ಲೆ ಮೈತ್ರಿಗೆ ಅಖಿಲೇಶ್ ಯಾದವ್ ಬಹಿರಂಗವಾಗಿ ಬೆಂಬಲ ನೀಡಿದ್ದು 403 ವಿಧಾನಸಭಾ ಕ್ಷೇತ್ರಗಳಲ್ಲಿ  300 ಸ್ಥಾನಗಳನ್ನು ಗೆಲ್ಲಲು ಇದು ಸಹಾಯ ಮಾಡಲಿದೆ ಎಂದು ಅಖಿಲೇಶ್ ಹೇಳಿದ್ದಾರೆ.

 

Follow Us:
Download App:
  • android
  • ios