ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಇಡುವ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ ಪತ್ನಿ ಪಾರ್ವತಿ ಅವರು ನೀಡಿರುವ ಕೆಂಪು ಬಾರ್ಡರ್ ಇರುವ ನೀಲಿ ಬಣ್ಣದ ಸೀರೆಯಿಂದ ಸಿಂಗರಿಸಲಾಗಿತ್ತು.

ಮೈಸೂರು(ಅ.01): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಇಡುವ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ ಪತ್ನಿ ಪಾರ್ವತಿ ಅವರು ನೀಡಿರುವ ಕೆಂಪು ಬಾರ್ಡರ್ ಇರುವ ನೀಲಿ ಬಣ್ಣದ ಸೀರೆಯಿಂದ ಸಿಂಗರಿಸಲಾಗಿತ್ತು.

ಸಿದ್ದರಾಮಯ್ಯ ಅವರು ಮುಂದಿನ ಬಾರಿಯೂ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು, ಸಿಎಂ ಆಗಬೇಕು ಎಂಬ ಉದ್ದೇಶದಿಂದ ಪಾರ್ವತಿಯವರು ಈ ಬಾರಿ ಪೂಜೆ ನೆರವೇರಿಸಿದ್ದಲ್ಲದೇ ಉತ್ಸವಮೂರ್ತಿಗೆ ಸೀರೆ ಕಾಣಿಕೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಬಳೇಪೇಟೆಯ ಉದ್ಯಮಿಯೊಬ್ಬರು ಬಹಳ ವರ್ಷಗಳಿಂದ ಉತ್ಸವಮೂರ್ತಿ ಸಿಂಗರಿಸುವ ಸೀರೆಯನ್ನು ಕಾಣಿಕೆಯಾಗಿ ಕೊಡುತ್ತಾ ಬಂದಿದ್ದರು. ಆದರೆ ಚಾಮುಂಡಿಬೆಟ್ಟಕ್ಕೆ ನವರಾತ್ರಿ ಪೂಜೆಗೆ

ಭೇಟಿ ನೀಡಿದ್ದ ಸಿಎಂ ಪತ್ನಿ ಪಾರ್ವತಿ ಅವರು ಈ ಬಾರಿ ನಾನು ಕೊಟ್ಟ ಸೀರೆಯಿಂದಲೇ ಉತ್ಸವಮೂರ್ತಿಯನ್ನು ಸಿಂಗರಿಸಬೇಕು ಎಂದು ಹೇಳಿದ್ದರು. ಈ ವಿಷಯವನ್ನು ಉದ್ಯಮಿ ಗಮನಕ್ಕೆ ತಂದು, ಪಾರ್ವತಿ ಅವರು ನೀಡಿರುವ ಸೀರೆಯಿಂದಲೇ ಸಿಂಗರಿಸಲಾಯಿತು.