23 ವರ್ಷದ ಯುವಕನ ಹೊಟ್ಟೆಯಲ್ಲಿ ಸ್ತ್ರೀಯರ ಗರ್ಭಕೋಶ ಪತ್ತೆಯಾಗಿ‌ ವೈದ್ಯರನ್ನೇ ಅಚ್ಚರಿ ಮೂಡಿಸಿರುವ ಘಟನೆ ಕೋಲಾರದ ಗಡಿ ಆಂಧ್ರ ಚಿತ್ತೂರಿನಲ್ಲಿ ನಡೆದಿದೆ.

ಕೋಲಾರ(ಮಾ.23): 23 ವರ್ಷದ ಯುವಕನ ಹೊಟ್ಟೆಯಲ್ಲಿ ಸ್ತ್ರೀಯರ ಗರ್ಭಕೋಶ ಪತ್ತೆಯಾಗಿ‌ ವೈದ್ಯರನ್ನೇ ಅಚ್ಚರಿ ಮೂಡಿಸಿರುವ ಘಟನೆ ಕೋಲಾರದ ಗಡಿ ಆಂಧ್ರ ಚಿತ್ತೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿ.ಕೋಟ ಮಂಡಲಂನ ಮುರಗಂದೊಡ್ಡಿ ಗ್ರಾಮದ 23 ವರ್ಷದ ಮುರುಗೇಶ್ ಎಂಬ ಯುವಕನ ಹೊಟ್ಟೆಯಲ್ಲಿ ಸ್ತ್ರೀಯರ ಗರ್ಭಕೋಶ ಪತ್ತೆಯಾಗಿದೆ. ಎರಡು ದಿನದ ಹಿಂದಷ್ಟೆ ಹೊಟ್ಟೆ ನೋವಿಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲಿ ಗರ್ಭಕೋಶ ಇರುವುದು ಗೊತ್ತಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶ ಹೊರತೆಗೆದಿರುವ ಪ್ರಿಯಾ ನರ್ಸಿಂಗ್ ಹೋಮ್​ನ ಸುಧೀರ್ ನೇತೃತ್ವದ ವೈದ್ಯರ ತಂಡ, ಹತ್ತು ಲಕ್ಷ ಜನರಲ್ಲಿ ಒಬ್ಬರಲ್ಲಿ ಕಂಡುಬರುವ ಅಪರೂಪದ ಪ್ರಕರಣ ಎಂದು ಸ್ಪಷ್ಟ ಪಡಿಸಿದ್ದಾರೆ.

ತಮಿಳುನಾಡಿನ ಹೊಸೂರು ಮೂಲದ ಅಮರನಾಥ ಎಂಬುವವರಿಗೆ ಕಳೆದ 15 ದಿನಗಳ ಹಿಂದಷ್ಟೆ ಇದೇ ರೀತಿಯ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು.