ಸದಾ ತಮ್ಮ ವಿಶೇಷ ಹಾವ-ಭಾವ ಸ್ಟಭಾವದಿಂದಲೇ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಬ್ಬ ರಾಜಕಾರಣಿ ಎನ್ನುವುದಕ್ಕಿಂತಲೂ ಹೆಚ್ಚಿಗೆ ಫೇಮಸ್. ಇಂಥ ವ್ಯಕ್ತಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ನೀಡಿದ್ದ ಪ್ರತಿಕ್ರಿಯೆ ಈಗ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. ಅಷ್ಕ್ಕೂ ಡೋನಾಲ್ಡ್ ಟ್ರಂಪ್ ಹೇಳಿದ್ದಾದರೂ ಏನು?
ತಮ್ಮ ಮಕ್ಕಳ ಅಥವಾ ಮೊಮ್ಮಕಳ ಪ್ರೈವೇಟ್ ಪಾರ್ಟ್ ಗಳ ಬಗ್ಗೆ ಯಾರು ತಾನೆ ಮಾತನಾಡುತ್ತಾರೆ? ಭಾರತದಲ್ಲಿ ಹೀಗೆ ಮಾತನಾಡಿದರೆ ಅದು ದೊಡ್ಡ ಅಪರಾಧವೇ ಸರಿ. ಆದರೆ ಡೋನಾಲ್ಡ್ ಟ್ರಂಪ್ ಹಾಗಲ್ಲ.
1994 ರಲ್ಲಿ ಲೈಫ್ ಸ್ಟೈಲ್ ಮ್ಯಾಗಜಿನ್ ವೊಂದು ಡೋನಾಲ್ಡ್ ಟ್ರಂಪ್ ಸಂದರ್ಶನ ಮಾಡಿತ್ತು. ಈ ವೇಳೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಡೋನಾಲ್ಡ್ ಉತ್ತರಿಸಿದ್ದರು. ಈ ವೇಳೆ ತಮ್ಮ ಮಗಳ ಎದೆಯ ಅಳತೆ ಬಗ್ಗೆ ಮಾತನಾಡಿದ್ದರು.ಮಗಳು ಟಿಫಾನಿ ತಾಯಿ ಮರ್ಲಾ ರೀತಿ ಇದ್ದಾರೆ. ಆಕೆಯ ಕಾಲುಗಳು ತಾಯಿ ತರಹವೇ ಇದೆ ಎನ್ನುತ್ತಾ ತಮ್ಮ ಕೖಯನ್ನು ಎದೆ ಭಾಗಕ್ಕೆ ತೋರಿಸಿ ಇನ್ನು ಆಕೆ ಪಡೆದುಕೊಂಡಿಲ್ಲ ಮುಂದೆ ನೋಡಬೇಕು ಎಂದಿದ್ದರು.
ಸಂದರ್ಶನದ ವೇಳೆ ಟಿಫಾನಿಗೆ ಒಂದು ವರ್ಷ ವಯಸ್ಸು. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಈ ಸುದ್ದಿ ಅದ್ಯಾವುದೋ ಕಾರಣಕ್ಕೆ ವೈರಲ್ ಆಗಿದೆ.
