ಪಾಕಿಸ್ತಾನ ಸರ್ಕಾರಕ್ಕೆ 2016ನೇ ಸಾಲಿನಲ್ಲಿ ನೀಡಬೇಕಾದ ನಿಧಿಯನ್ನು ತಡೆ ಹಿಡಿಯಲಾಗುತ್ತದೆ ಎಂದು ಪೆಂಟಗಾನ್ ವಕ್ತಾರ ಆ್ಯಡಂ ಸ್ಟಂಪ್ ಹೇಳಿದ್ದಾರೆ
ವಾಷಿಂಗ್ಟನ್(ಜು.21): ಹಕ್ಕಾನಿ ಉಗ್ರ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ಸುಮಾರು 2250 ಕೋಟಿ ರು. ಸೇನಾ ನೆರವು ಕೊಡುವುದಿಲ್ಲ ಎಂದು ಅಮೆರಿಕ ಘೋಷಣೆ ಮಾಡಿದೆ. ಹಕ್ಕಾನಿ ಜಾಲದ ವಿರುದ್ಧ ಪಾಕಿಸ್ತಾನ ನಿರ್ದಿಷ್ಟ ಕ್ರಮ ಕೈಗೊಂಡಿದೆ ಎಂಬುದನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ದೃಢಪಡಿಸಿಲ್ಲವಾದ್ದರಿಂದ, ಪಾಕಿಸ್ತಾನ ಸರ್ಕಾರಕ್ಕೆ 2016ನೇ ಸಾಲಿನಲ್ಲಿ ನೀಡಬೇಕಾದ ನಿಧಿಯನ್ನು ತಡೆ ಹಿಡಿಯಲಾಗುತ್ತದೆ ಎಂದು ಪೆಂಟಗಾನ್ ವಕ್ತಾರ ಆ್ಯಡಂ ಸ್ಟಂಪ್ ಹೇಳಿದ್ದಾರೆ. ನೆರೆಯ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡುತ್ತಿರುವ ಉಗ್ರ ಸಂಘಟನೆಗಳನ್ನು ಭೇದಿಸಿ, ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚನೆ ನೀಡಿದ್ದರು.
