ಭಾರತದ ಮಾಧ್ಯಮಗಳಲ್ಲಿ ಕೆಲವೊಂದು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಐಎಸ್ ದಾಳಿ ನಡೆಸಲಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿವೆ.

ನವದೆಹಲಿ(ನ.2): ಉಗ್ರ ಸಂಘಟನೆ ಐಎಸ್ ಭಾರತದಲ್ಲಿ ಕೆಲವು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ತನ್ನ ನಾಗರಿಕರಿಗೆ ಎಚ್ಚರಿಕೆ ರವಾನಿಸಿದೆ. ಭಾರತದ ಮಾಧ್ಯಮಗಳಲ್ಲಿ ಕೆಲವೊಂದು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಐಎಸ್ ದಾಳಿ ನಡೆಸಲಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿವೆ. ಅಂಥ ಸ್ಥಳಗಳಿಂದ ದೂರವಿರಬೇಕು. ಅಮೆರಿಕದ ಎಲ್ಲ ನಾಗರಿಕರೂ ಗರಿಷ್ಠ ಪ್ರಮಾಣದ ಎಚ್ಚರಿಕೆ ಕಾಯ್ದುಕೊಳ್ಳಬೇಕು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮಂಗಳವಾರ ರಾತ್ರಿ ಹೊರಡಿಸಿರುವ ಸಲಹೆಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಪಾಶ್ಚಿಮಾತ್ಯ ಅದರಲ್ಲೂ ಅಮೆರಿಕ ವಿರೋ ಇಸ್ಲಾಮಿಕ್ ತೀವ್ರವಾದಿಗಳು ಹೆಚ್ಚಾಗಿದ್ದಾರೆಂದು ಸೂಚಿಸಲಾಗಿದೆ.