ಟ್ರಂಪ್ ರಿಂದ ವಿವಾದಿತ ನೀತಿ ವಾಪಸ್

US President reversing decision on immigration crisis
Highlights

ಅಮೆರಿಕದೊಳಕ್ಕೆ ಅಕ್ರಮವಾಗಿ ನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಿಸುವ ನೀತಿಗೆ ಭಾರೀ ವಿರೋಧ ವ್ಯಕ್ತ ವಾದ ಬೆನ್ನಲ್ಲೇ, ಈ ವಿವಾದಿತ ವಲಸೆ ನೀತಿಯನ್ನು ವಾಪಸ್ ಪಡೆಯುವ ಆದೇಶಕ್ಕೆ ಸಹಿ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಾಗಿದ್ದಾರೆ. 

ನ್ಯೂಯಾರ್ಕ್: ಅಮೆರಿಕದೊಳಕ್ಕೆ ಅಕ್ರಮವಾಗಿ ನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಿಸುವ ನೀತಿಗೆ ಭಾರೀ ವಿರೋಧ ವ್ಯಕ್ತ ವಾದ ಬೆನ್ನಲ್ಲೇ, ಈ ವಿವಾದಿತ ವಲಸೆ ನೀತಿಯನ್ನು ವಾಪಸ್ ಪಡೆಯುವ ಆದೇಶಕ್ಕೆ ಸಹಿ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಾಗಿದ್ದಾರೆ. 

ಅಕ್ರಮ ವಲಸಿಗರ ಮಕ್ಕಳನ್ನು ಬೇರ್ಪಡಿಸುವ ನೀತಿಗೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ  ವಲಸಿಗರ ಮಕ್ಕಳು ಆ ಕುಟುಂಬದ ಸಹಿತವೇ ಇರಲು ಅವಕಾಶ ನೀಡುವ ಆದೇಶಕ್ಕೆ ಸಹಿ ಹಾಕು ವುದಾಗಿ ಅಮೆರಿಕದ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಘೋಷಣೆ ಮಾಡಿದ್ದಾರೆ.

loader