ವಾಷಿಂಗ್ಟನ್ : ಕನಾಸ್‌ನಲ್ಲಿ ಭಾರತೀಯ ಟೆಕ್ಕಿ ಶ್ರೀನಿವಾಸ ಕುಚಿಭೋಟ್ಲ ಅವರನ್ನು ಗುಂಡು ಹಾರಿಸಿ ಕೊಂದ ನೌಕಾಪಡೆ ಮಾಜಿ ಯೋಧ ಆ್ಯಡಂ ಪ್ಯೂರಿನ್ಟನ್ ಗೆ ಅಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಈ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕಾ ನ್ಯಾಯಾಲಯ  ಪ್ಯೂರಿನ್ಟನ್ ಅಪರಾಧಿ ಎಂದು ತೀರ್ಪು ನೀಡಿದ್ದು,  ಜೀವಾವಧಿ ಶಿಕ್ಷೆ ವಿಧಿಸಿದೆ.   

 ಶ್ರೀನಿವಾಸ್ ಕುಚಿಭೋಟ್ಲಾ ಪತ್ನಿ ಸುನಯನ ದುಮಾಲ,  ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಅಲ್ಲದೇ ಇಂದು ಆ ವ್ಯಕ್ತಿಗೆ ನೀಡಿದ ಶಿಕ್ಷೆಯಿಂದ ನನ್ನ ಗಂಡ ನನಗೆ ವಾಪಸ್ ಸಿಗುವುದಿಲ್ಲ. ಆದರೆ  ಇಂತಹ ಘಟನೆಗಳು ಮತ್ತೆ ನಡೆಯದಂತೆ ಇದೊಂದು ಪಾಠವಾಗಬೇಕು.  ಈ ಸಂಬಂಧ ನ್ಯಾಯಾಲಯಕ್ಕೆ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸುನಯನ ಹೇಳಿದ್ದಾರೆ. 

ಜನಾಂಗೀಯ ಧ್ವೇಷದಿಂದ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಭಾರತೀಯ ಟೆಕ್ಕಿ ಶ್ರೀನಿವಾಸ್ ಹತ್ಯೆ ಮಾಡಲಾಗಿತ್ತು.  ಅಲ್ಲದೇ ಹತ್ಯೆ ಮಾಡುವ ಮುನ್ನ ನಮ್ಮ ದೇಶ ಬಿಟ್ಟು ತೊಲಗಿ ಎಂದು ಹೇಳಿ ಕೊಂದ ವ್ಯಕ್ತಿ ಅಬ್ಬರಿಸಿದ್ದ. 

 ಶ್ರೀನಿವಾಸ್  ಯುಎಸ್'ನ ಒಲ್ತೆ'ದ ಪಟ್ಟಣದಲ್ಲಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾನ್ವಾಸ್ ಬಾರ್'ನ ನೈಟ್ ಕ್ಲಬ್'ಗೆ ಹೋಗಿದ್ದ ವೇಳೆ ಗುಂಡು ಹಾರಿಸಿ ಶ್ರೀನಿವಾಸ್ ಹತ್ಯೆ ಮಾಡಲಾಗಿತ್ತು.