ಆನ್ ಡೊನ್ನೆಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬಾರಾಕ್ ಒಬಾಮ ಅವರಿಂದ ನೇಮಕವಾದ ನ್ಯಾಯಾಧೀಶರಾಗಿದ್ದಾರೆ. ಟ್ರಂಪ್ ಆದೇಶವನ್ನು ತಡೆಹಿಡಿಯಬೇಕೆಂದು ಅಮೆರಿಕಾದ ನಾಗರಿಕ ಸ್ವಾತಂತ್ರ ಸಂಘಟನೆ ಕೋರ್ಟ್ ಮೋರೆ ಹೋಗಿತ್ತು.

ವಾಷಿಂಗ್ಟನ್(ಜ.29): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್'ಗೆ ಆರಂಭದಲ್ಲೇ ಮುಖಭಂಗವಾಗಿದ್ದು, 7 ರಾಷ್ಟ್ರಗಳ ವಲಸಿಗರು ಹಾಗೂ ನಿರಾಶ್ರಿತರ ವೀಸಾ ನಿರ್ಬಂಧ ನೀತಿಗೆ ಅಮೆರಿಕಾ ಜಿಲ್ಲಾ ಕೋರ್ಟ್ ತಡೆ ನೀಡಿದೆ.

ನಿಷೇಧಕ್ಕೆ ತುರ್ತು ತಡೆ ನೀಡಿರುವ ಅಮೆರಿಕಾದ ಜಿಲ್ಲಾ ಕೋರ್ಟ್,ಅಮೆರಿಕಾದ ನಾಗರಿಕತ್ವ ಹಾಗೂ ವಲಸೆ ಸೇವೆಗಳು ದೇಶದ ಕಾನೂನಿನ ನಿರಾಶ್ರಿತರ ಪ್ರವೇಶದ ಒಂದು ಭಾಗವಾಗಿದ್ದು, ಸರ್ಕಾರ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ' ಎಂದು ಜಿಲ್ಲಾ ನ್ಯಾಯಾಧೀಶರಾದ ಆನ್ ಡೊನ್ನೆಲ್ಲಿ' ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಆನ್ ಡೊನ್ನೆಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬಾರಾಕ್ ಒಬಾಮ ಅವರಿಂದ ನೇಮಕವಾದ ನ್ಯಾಯಾಧೀಶರಾಗಿದ್ದಾರೆ. ಟ್ರಂಪ್ ಆದೇಶವನ್ನು ತಡೆಹಿಡಿಯಬೇಕೆಂದು ಅಮೆರಿಕಾದ ನಾಗರಿಕ ಸ್ವಾತಂತ್ರ ಸಂಘಟನೆ ಕೋರ್ಟ್ ಮೋರೆ ಹೋಗಿತ್ತು.

ಟ್ರಂಪ್ ಹೊಸ ನಿಯಮದ ಪ್ರಕಾರ, ಮುಸ್ಲಿಂ ದೇಶಗಳಾದ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ದೇಶಗಳ ವಲಸಿಗರು ಹಾಗೂ ನಿರಾಶ್ರಿತರಿಗೆ ಮುಂದಿನ 90 ದಿನಗಳ ಅವಧಿಯಲ್ಲಿ ವೀಸಾ ನಿರ್ಬಂಧಿಸಲಾಗಿದೆ. ಈ ನಿರ್ಬಂಧವನ್ನು ವಿರೋಧಿಸಿ ಅಮೆರಿಕಾದಾದ್ಯಂತ ವಿಮಾನ ನಿಲ್ದಾಣಗಳಿಂದ ಸಾವಿರಾರು ಮಂದಿ ಪ್ರತಿಭಟನೆ ಹಮ್ಮಿಕೊಂಡಿದ್ದರು.