Asianet Suvarna News Asianet Suvarna News

ಜೈಶಂಕರ್ ವಿಶ್ವದ ಉತ್ತಮ ರಾಜತಾಂತ್ರಿಕ: ಅಮೆರಿಕ!

ವಿದೇಶಾಂಗ ಸಚಿವರಾಗಿ ಎಸ್. ಜೈಶಂಕರ್ ಆಯ್ಕೆ ಹೊಗಳಿದ ಅಮೆರಿಕ| ಜೈಶಂಕರ್ ವಿಶ್ವದ ಉತ್ತಮ ರಾಜತಾಂತ್ರಿಕ ಎಂದ ಅಮೆರಿಕ| ಮೋದಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮೆರಿಕ| ಭಾರತ-ಅಮೆರಿಕ ಸಂಬಂಧ ಸುಧಾರಣೆಯಲ್ಲಿ ಜೈಶಂಖರ್ ಮಹತ್ವದ ಪಾತ್ರ|

US Experts Says S Jaishankar One Of The Best Diplomats
Author
Bengaluru, First Published Jun 8, 2019, 4:06 PM IST

ವಾಷಿಂಗ್ಟನ್(ಜೂ.08): ಭಾರತದ ವಿದೇಶಾಂಗ ಸಚಿವರಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರನ್ನು ಆಯ್ಕೆ ಮಾಡಿರುವ ಪ್ರಧಾನಿ ಮೋದಿ ನಡೆಯನ್ನು ಅಮೆರಿಕ ಸ್ವಾಗತಿಸಿದೆ.

ಎಸ್.ಜೈಶಂಕರ್ ವಿಶ್ವದ ಉತ್ತಮ ರಾಜತಾಂತ್ರಿಕರದಲ್ಲಿ ಒಬ್ಬರು ಎಂದಿರುವ ಅಮೆರಿಕ, ಜೈಶಂಕರ್ ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿದ್ದಾಗ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಒತ್ತು ನೀಡಿದ್ದರು ಎಂದು ಹೊಗಳಿದೆ.

ಭಾರತ-ಅಮೆರಿಕ ನಡುವಿನ ಅಣು ಒಪ್ಪಂದದ ಸಮಯದಲ್ಲಿ ಜೈಶಂಕರ್ ಅತ್ಯಂತ ಮಹತ್ವದ ಪಾತ್ರ ನಿರ್ವಹಸಿದ್ದರು ಎಂದಿರುವ ಅಮೆರಿಕ, ಇದೀಗ ವಿದೇಶಾಂಗ ಇಲಾಖೆಯ ಜವಾಬ್ದಾರಿ ಹೊತ್ತಿರುವ ಜೈಶಂಕರ್ ಖಂಡಿತವಾಗಿಯೂ ಎರಡೂ ದೇಶಗಳ ನಡುವಿನ ಭಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
 
ಜೈಶಂಕರ್ ವಿದೇಶಾಂಗ ಸಚಿವರಾಗಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ಸಹಾಯಕ ಕಾರ್ಯದರ್ಶಿಯಾಗಿದ್ದ ನೇಹಾ ದೇಸಾಯಿ ಬಿಸ್ವಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios