ವಾಷಿಂಗ್ಟನ್(ಜ.13): ಪಾಕಿಸ್ತಾನದ ಹೆಸರನ್ನು ನ್ಯಾಟೋ ಹೊರತಾದ ಮಿತ್ರರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಲು ಅಮೆರಿಕ ಕಾಂಗ್ರೆಸ್ ಶಾಸನ ಜಾರಿಗೆ ಮುಂದಾಗಿದೆ.

ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ ಕಾಂಗ್ರೆಸಿಗ ಆ್ಯಂಡಿ ಬ್ರಿಗ್ಸ್ 73 ನೇ ನಿರ್ಣಯದ ಮೂಲಕ ಈ ಶಾಸನವನ್ನು ಪರಿಚಯಿಸಿದರು.

ಪಾಕಿಸ್ತಾನವನ್ನು ನ್ಯಾಟೋ ಹೊರತಾದ ಪ್ರಮುಖ ಮಿತ್ರರಾಷ್ಟ್ರಗಳ ಪಟ್ಟಿಯಿಂದ ಕೈಬಿಡುವುದು ಮತ್ತು ಒಂದೊಮ್ಮೆ ಮತ್ತೆ ಪಟ್ಟಿಗೆ ಸೇರಿಸಬೇಕಾದಲ್ಲಿ ಪೂರೈಸಬೇಕಾದ ಷರತ್ತುಗಳ ವಿವರ ಇದರಲ್ಲಿದೆ.

ಸದ್ಯ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುವುದಕ್ಕಾಗಿ ಶಾಸನವನ್ನು ವಿದೇಶಾಂಗ ವ್ಯವಹಾರಗಳ ಸಮಿತಿಗೆ ಹಸ್ತಾಂತರಿಸಲಾಗಿದೆ.

ಅಮೆರಿಕ ಅಧ್ಯಕ್ಷ ಭವಿಷ್ಯದಲ್ಲಿ ಪಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎನ್ನುವ ಸೂಚನೆ ಇದರಲ್ಲಿದೆ.

ಹಕ್ಕಾನಿ ನೆಟ್ವರ್ಕ್ ಸಂಬಂದ ಕಡಿದು ಹಾಕಲು ಪಾಕಿಸ್ತಾನ ಮುಂದಾಗಬೇಕಿದ್ದು ಇದಕ್ಕಾಗಿ ಪಾಕ್-ಅಫ್ಘಾನ್ ಗಡಿಗುಂಟ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಲುವ ಸಾಧ್ಯತೆಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.