ಅಮೆರಿಕಾದ ಕಾಲ್ ಹೌನ್ ಕೌಂಟಿ ಪ್ರೌಢ ಶಾಲೆಯಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮೇಜಿನ ಮೇಲೆ ಹತ್ತಿ ಶಿಕ್ಷಕನಿಗೇ ಕಾಲಿನಿಂದ ಒದ್ದಿದ್ದಲ್ಲದೇ, ಕಪಾಳಕ್ಕೆ ಬಾರಿಸಿದ್ದಾಳೆ. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದೆ.

ಶಿಕ್ಷಕನೊಬ್ಬ ಪಾಠ ಮಾಡಲು ತರಗತಿಗೆ ಆಗಮಿಸಿದ್ದಾರೆ. ಈ ವೇಳೆ ಏಕಾಏಕಿ ಮೇಜಿನ ಮೇಲೆ ಹತ್ತಿದ ವಿದ್ಯಾರ್ಥಿನಿ ಶಿಕ್ಷಕನಿಗೆ ಕಾಲಿನಿಂದ ಒದೆಯಲಾರಂಭಿಸಿದ್ದಾಳೆ. ಈಕೆಯ ವರ್ತನೆ ಕಂಡು ತರಗತಿಯಲ್ಲಿದ್ದ ವಿದ್ಯಾರ್ಥಿಗಳು ನಗಲಾರಂಭಿಸಿದ್ದಾರೆ. ಅತ್ತ ಶಿಕ್ಷಕ ಕುಳಿತಲ್ಲಿದ್ದ ಏಳಲಾಗದೆ ಪರದಾಡುತ್ತಿದ್ದರೆ, ಇತ್ತ ವಿದ್ಯಾರ್ಥಿನಿ ಸಾಲದೆಂಬಂತೆ ಕಪಾಳಕ್ಕೆ ಬಾರಿಸಲಾರಂಭಿಸಿದ್ದಾಳೆ.

ವಿದ್ಯಾರ್ಥಿನಿಯ ಈ ಅನಿರೀಕ್ಷಿತ ವರ್ತನೆ ಕಂಡು ಬೆಚ್ಚಿ ಬಿದ್ದ ಶಿಕ್ಷಕ ಅದೇಗೋ ಪರದಾಡಿ ದೂರ ಹೋಗಿ ನಿಂತಿದ್ದಾರೆ. ಇದಾದ ಬಳಿಕ ವಿದ್ಯಾರ್ಥಿನಿ ಮೇಜಿನ ಮೇಲೆ ಕಾಲಿಟ್ಟು ಕುರ್ಚಿಯ ಮೇಲೆ ಕುಳಿತಿದ್ದಾಳೆ. ಯುವತಿಯ ಈ ವರ್ತನೆ ಬಳಿಕ ಆಕೆಯನ್ನು ಶಾಲೆಯಿಂದ ಅಮಾನತ್ತುಗೊಳಿಸಲಾಗಿದೆ ಅಲ್ಲದೇ ಶಾಲಾ ಮಂಡಳಿಯು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.