ಸಮಾಜ ಸೇವೆ ಎಂದು ತಮ್ಮ ಕೆಲಸ ಗುರುತಿಸಿಕೊಳ್ಳುವ ನಮ್ಮ ಶಾಸಕರು ಪಡೀತಾ ಇರೋ ಸೌಲಭ್ಯಗಳಿಗೆ ಯಾವತ್ತಿಗೂ ಕೊರತೆ ಇರೋದೇ ಇಲ್ಲ. ಕ್ಷೇತ್ರ ಭತ್ಯೆ, ಪ್ರಯಾಣ ಭತ್ಯೆ, ದಿನ ಭತ್ಯೆ, ಸಾರಿಗೆ ಭತ್ಯೆ..ಹೀಗೆ ಭತ್ಯೆಗಳ ಭಾಗ್ಯಗಳನ್ನು ಅನುಭವಿಸ್ತಿರುವ ಶಾಸಕರು, ಸಮಿತಿ ಸಭೆಗಳಿಗೆ ಬಂದು  ಹೋಗ್ಲಿಕ್ಕೆ  ಪ್ರತ್ಯೇಕವಾಗಿ ಪಡೀತಾ ಇರೋದು ವರ್ಷಕ್ಕೆ ಏನಿಲ್ಲ ಅಂದ್ರೂ ಲಕ್ಷಾಂತರ ರೂಪಾಯಿ ಆಗುತ್ತೆ. ಇನ್ನು, ಬೆಂಗ್ಳೂರ್​ನಲ್ಲಿರೋ 28 ಮಂದಿ ಶಾಸಕರುಗಳು, ಬೆಂಗ್ಳೂರ್​ನಲ್ಲೇ ವಾಸ ಇದ್ದರೂ ಐದು ದಿನಕ್ಕೆ ಲೆಕ್ಕ ಹಾಕಿ  ಪ್ರಯಾಣ ಭತ್ಯೆ, ದಿನ ಭತ್ಯೆ ರೂಪದಲ್ಲಿ ಸಾವಿರಾರು ರೂಪಾಯಿ ಪಡ್ಕೊಳ್ತಿದಾರೆ. ಬೆಂಗ್ಳೂರ್​ನಲ್ಲೇ ವಾಸ ಮಾಡುವ ಶಾಸಕರಿಗೇಕೆ 5 ದಿನದ ಪ್ರಯಾಣ ಭತ್ಯೆ, ದಿನ ಭತ್ಯೆ ಕೊಡ್ಬೇಕು ಅನ್ನೋ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ಬೆಂಗಳೂರು (ಏ.04): ಸಮಾಜ ಸೇವೆ ಎಂದು ತಮ್ಮ ಕೆಲಸ ಗುರುತಿಸಿಕೊಳ್ಳುವ ನಮ್ಮ ಶಾಸಕರು ಪಡೀತಾ ಇರೋ ಸೌಲಭ್ಯಗಳಿಗೆ ಯಾವತ್ತಿಗೂ ಕೊರತೆ ಇರೋದೇ ಇಲ್ಲ. ಕ್ಷೇತ್ರ ಭತ್ಯೆ, ಪ್ರಯಾಣ ಭತ್ಯೆ, ದಿನ ಭತ್ಯೆ, ಸಾರಿಗೆ ಭತ್ಯೆ..ಹೀಗೆ ಭತ್ಯೆಗಳ ಭಾಗ್ಯಗಳನ್ನು ಅನುಭವಿಸ್ತಿರುವ ಶಾಸಕರು, ಸಮಿತಿ ಸಭೆಗಳಿಗೆ ಬಂದು ಹೋಗ್ಲಿಕ್ಕೆ ಪ್ರತ್ಯೇಕವಾಗಿ ಪಡೀತಾ ಇರೋದು ವರ್ಷಕ್ಕೆ ಏನಿಲ್ಲ ಅಂದ್ರೂ ಲಕ್ಷಾಂತರ ರೂಪಾಯಿ ಆಗುತ್ತೆ. ಇನ್ನು, ಬೆಂಗ್ಳೂರ್​ನಲ್ಲಿರೋ 28 ಮಂದಿ ಶಾಸಕರುಗಳು, ಬೆಂಗ್ಳೂರ್​ನಲ್ಲೇ ವಾಸ ಇದ್ದರೂ ಐದು ದಿನಕ್ಕೆ ಲೆಕ್ಕ ಹಾಕಿ ಪ್ರಯಾಣ ಭತ್ಯೆ, ದಿನ ಭತ್ಯೆ ರೂಪದಲ್ಲಿ ಸಾವಿರಾರು ರೂಪಾಯಿ ಪಡ್ಕೊಳ್ತಿದಾರೆ. ಬೆಂಗ್ಳೂರ್​ನಲ್ಲೇ ವಾಸ ಮಾಡುವ ಶಾಸಕರಿಗೇಕೆ 5 ದಿನದ ಪ್ರಯಾಣ ಭತ್ಯೆ, ದಿನ ಭತ್ಯೆ ಕೊಡ್ಬೇಕು ಅನ್ನೋ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ನಮ್ಮ ಶಾಸಕರು ಒಂದ್ ರೀತೀಲಿ ತುಂಬಾ ಅದೃಷ್ಟವಂತರು. ರಾಜ್ಯದಲ್ಲಿ ಬರಗಾಲ ಇರಲಿ, ಪ್ರವಾಹ ಬರಲಿ, ಆದ್ರೆ ಅವರು ಪಡ್ಕೊಳ್ತಿರೋ ಸೌಲಭ್ಯಗಳಿಗೆ, ಭತ್ಯೆಗಳಿಗೆ ಮಾತ್ರ ಯಾವ್ದೇ ಕಡಿವಾಣ ಬೀಳೋದಿಲ್ಲ. ಅಧಿವೇಶನ ಇರಲಿ, ಬಿಡಲಿ. ವಿಧಾನಸಭೆ, ವಿಧಾನಪರಿಷತ್​ ಸಚಿವಾಲಯದ ಬೊಕ್ಕಸದಿಂದ ಭತ್ಯೆಗಳ ಹೆಸರಿನಲ್ಲೇ ಲಕ್ಷಾಂತರ ರೂಪಾಯಿ ಖಾಲಿ ಆಗುತ್ತೆ. ಖರ್ಚುಗಳ ಮೇಲೆ ಖರ್ಚಾಗ್ತಿದ್ದರೂ ಪ್ರಯಾಣ ಭತ್ಯೆ, ದಿನ ಭತ್ಯೆ ಬೇಡ ಎಂದು ಯಾವೊಬ್ಬ ಶಾಸಕರೂ ಹೇಳೋಲ್ಲ ಬಿಡಿ.

ಶಾಸಕರಾಗ್ತಿದ್ಹಂಗೆ ಅವರಿಗೆ ಆ ಕ್ಷಣದಿಂದಲೇ ಕ್ಷೇತ್ರ ಭತ್ಯೆ, ಪ್ರಯಾಣ ಭತ್ಯೆ ಸೇರಿ ಬೇರೆ ರೀತಿಯ ಭತ್ಯೆಗಳು ಸಿಗುತ್ತೆ. ಅದ್ರಲ್ಲೂ ತುಂಬಾ ಮುಖ್ಯವಾಗಿ ವಿವಿಧ ಸಮಿತಿಗಳಿಗೆ ಸದಸ್ಯರಾಗಿರುವ ಶಾಸಕರುಗಳು ಪ್ರತ್ಯೇಕವಾಗಿ ಪ್ರಯಾಣ ಭತ್ಯೆ, ದಿನ ಭತ್ಯೆ ರೂಪದಲ್ಲಿ ಸಾವಿರಾರು ರೂಪಾಯಿ ಪಡ್ಕೊಳ್ತಿದಾರೆ. ಇದಕ್ಕೆಂದೇ ಕಳೆದ 3 ವರ್ಷಗಳಲ್ಲಿ ಸಮಿತಿಗಳಿಗೆ ಸದಸ್ಯರಾಗಿರುವ ಶಾಸಕರುಗಳಿಗೆ ಪಾವತಿ ಆಗಿರೋದು ಬರೋಬ್ಬರಿ 60 ಕೋಟಿ ರೂಪಾಯಿ.

ವಿಧಾನಸಭೆ ಸಚಿವಾಲಯದಲ್ಲಿ ಇರೋ ಒಟ್ಟು ಸಮಿತಿಗಳ ಸಂಖ್ಯೆ 18. ಅರ್ಜಿಗಳ ಸಮಿತಿ, ಅಂದಾಜು ಸಮಿತಿ, ಕೆರೆ ಒತ್ತುವರಿ ಸಮಿತಿ, ಕಾಗದಪತ್ರಗಳ ಸಮಿತಿ, ವಸತಿ ಸೌಕರ್ಯ ಸಮಿತಿ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿ....ಹೀಗೆ 18 ಸಮಿತಿಗಳಿಗೆ ನಮ್ಮ ಶಾಸಕರೇ ಸದಸ್ಯರು. ಅದಕ್ಕೆ ಹಿರಿಯ ಶಾಸಕರುಗಳೇ ಅಧ್ಯಕ್ಷರು. ಒಂದೊಂದ್​ ಸಮಿತಿ ವಾರದಲ್ಲಿ ಒಂದೊಂದ್​ ದಿನ ವಿಧಾನಸೌಧದಲ್ಲಿ ಸಭೆ ಸೇರುತ್ತೆ. 

ಕೆಲಗಂಟೆಗಳಸಭೆಗೆಲಕ್ಷಾಂತರರೂಪಾಯಿಖರ್ಚು

ಒಂದೊಂದು​ ಸಮಿತಿಯಲ್ಲಿ 12 ಮಂದಿ ಶಾಸಕರು ಇರ್ತಾರೆ. ವಾರದಲ್ಲಿ ಒಂದು​ ದಿನ ಈ ಸಮಿತಿ ಸಭೆ ಸೇರುತ್ತೆ. ಇನ್ನು, ಸಭೆ ನಡೆಯೋದು ಕೆಲವೇ ಕೆಲವು ಗಂಟೆಗಳ ಕಾಲ ಮಾತ್ರ. ಬೆಂಗಳೂರು ನಗರದ ಶಾಸಕರನ್ನು ಹೊರತುಪಡಿಸಿ ಒಬ್ಬೊಬ್ಬ ಶಾಸಕರಿಗೆ ಒಟ್ಟು 5 ದಿನದ ಪ್ರಯಾಣ ಭತ್ಯೆ, ದಿನ ಭತ್ಯೆ ಸೇರಿ ಗರಿಷ್ಠ ಎಂದರೆ 44 ಸಾವಿರ ರೂಪಾಯಿವರೆಗೆ ಸಿಗುತ್ತೆ. ಸಮಿತಿ ಸದಸ್ಯರಿಗೆ ಒಂದು ದಿನದಲ್ಲಿ ನಡೆಯುವ ಸಭೆಗೆ ಕೊಡ್ತಿರೋ ಪ್ರಯಾಣ, ದಿನ ಭತ್ಯೆ ಮೊತ್ತ 5 ಲಕ್ಷ ದಾಟುತ್ತೆ. ಅಂದ್ಹಂಗೆ, ಇದು ಒಂದು ಸಮಿತಿಯ ಲೆಕ್ಕ ಅಷ್ಟೇ.

ಬೆಂಗಳೂರು ಶಾಸಕರಿಗೇಕೆ 5 ದಿನದ ಭತ್ಯೆ?

ವಾಯ್ಸ್​: ವಿವಿಧ ಸಮಿತಿಗಳಿಗೆ ಸದಸ್ಯರಾಗಿರುವ ಬೆಂಗಳೂರಿನ ಬಹುತೇಕ ಶಾಸಕರು ವಾಸ ಇರೋದು ಕೂಡ ಇದೇ ಬೆಂಗಳೂರಿನಲ್ಲೇ. ಒಂದೆರಡು ಗಂಟೆಯಲ್ಲಿ ವಿಧಾನಸೌಧಕ್ಕೆ ಬರಬಹುದು. ಆದ್ರೆ ಇವರಿಗೂ 5 ದಿನದ ಪ್ರಯಾಣ ಭತ್ಯೆ ದಿನ ಭತ್ಯೆ ಸಿಗ್ತಿದೆ. ಇವರಿಗೆ ಒಟ್ಟು ಕೊಡ್ತಿರೋದು 11,500 ರೂಪಾಯಿ. ಒಬ್ಬೊಬ್ಬ ಶಾಸಕ, ಮೂರ್ನಾಲ್ಕು ಸಮಿತಿಗಳಿಗೆ ಸದಸ್ಯರಾಗಿರ್ತಾರೆ. ಪ್ರತಿ ಸಮಿತಿಗೂ ಪ್ರತ್ಯೇಕವಾಗಿ ಪ್ರಯಾಣ, ದಿನ ಭತ್ಯೆ ಸಿಗುತ್ತೆ. ಬೆಂಗಳೂರು ಹೊರತುಪಡಿಸಿ ಉಳಿದ ಕ್ಷೇತ್ರಗಳಿಂದ ಬರುವ ಶಾಸಕರುಗಳಿಗೆ 5 ದಿನಕ್ಕೆ ಲೆಕ್ಕ ಹಾಕಿ ಪ್ರಯಾಣ, ದಿನ ಭತ್ಯೆ ಕೊಡ್ತಿರೋದೇನೂ ಸರಿ....ಆದ್ರೆ ಬೆಂಗಳೂರ್​ನಲ್ಲೇ ವಾಸ ಇರೋ ಶಾಸಕರಿಗೂ 5 ದಿನಕ್ಕೆ ಲೆಕ್ಕ ಹಾಕಿ ಪ್ರಯಾಣ, ದಿನ ಭತ್ಯೆ ಕೊಡ್ತಿರೋದು ಎಷ್ಟರಮಟ್ಟಿಗೆ ಸರಿ ಅನ್ನೋ ಆಕ್ಷೇಪ ಕೂಡ ಈಗ ಕೇಳ್ಬಂದಿದೆ. ಅವ್ರಿಗೆಲ್ಲಾ ಇದೊಂದ್ ರೀತಿ ಪಾಕೆಟ್​ ಮನಿ ಇದ್ಹಂಗೆ....ಅನ್ನೋ ಆರೋಪಗಳು ಕೇಳಿಬಂದಿವೆ.