ಬೆಂಗಳೂರು [ಜೂನ್ 19]  ಕೊಟ್ಟ ಖಾತೆಯನ್ನು ಒಲ್ಲೆ ಎಂದಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಮ್ಮ ಕಚೇರಿಯತ್ತಲೂ ಸುಳಿದಿರಲಿಲ್ಲ. ಇದೀಗ ಇಲಾಖೆಗೆ ಸಂಬಂಧಿಸಿದ ಫೈಲ್ ಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಸಚಿವರನ್ನು ಕಾಣಲು ಅಧಿಕಾರಿಗಳು ಹೋದರೆ ‘ ಅಯ್ಯೋ.. ನನ್ನ ಹತ್ರ ಏಕೆ ಬರ್ತಿರಾ..? ಬರಬೇಡ್ರಾಪ್ಪ ನೀವು..!  ಎನ್ನುತ್ತಾ ಸಿಎಂ ಕುಮಾರಸ್ವಾಮಿ ಬಳಿಗೆ ಕಳುಹಿಸಿಕೊಡುತ್ತಾ ಇದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಹೋದರೂ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. 

ನನಗೂ ಉನ್ನತ ಶಿಕ್ಷಣ ಇಲಾಖೆಗೂ ಯಾವುದೇ ಸಂಬಂಧವೇ ಇಲ್ಲ,  ನೀವು ಸಿಎಂ ಹೆಚ್‌ಡಿಕೆ ಅವರ ಹತ್ರನೇ ಹೋಗಿ, ಅವರಿಗೆ ಫೈಲ್ ತೋರಿಸಿ, ಸಿಎಂ ಕುಮಾರಣ್ಣ ಅವರೇ ಫೈಲ್‌ಗಳನ್ನ ಕ್ಲಿಯರ್ ಮಾಡ್ತಾರೆ, ನಾನು ಮಾಡಲ್ಲ ಎಂದು ಜಿಟಿಡಿ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. 

ಉನ್ನತ ಶಿಕ್ಷಣ ಇಲಾಖೆ ಸದ್ಯ ಜಿ ಟಿ ದೇವೇಗೌಡ ಅವರ ಬಳಿಯೆ ಇದೆ.  ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ  ಹಲವು ಕಡತಗಳು ಬಾಕಿ ಇದ್ದು ಕ್ಲೀಯರ್ ಮಾಡುವುದು ಯಾರು? ಎಂಬ ಪ್ರಶ್ನೆ ಎದುರಾಗಿದೆ.