ರಾಜಕೀಯ ಸಂಚಲನ ಮೂಡಿಸಿರುವ ಉಪೇಂದ್ರರವರ ಪ್ರಜಾಕೀಯ ಪಕ್ಷಕ್ಕೆ ಬರುವವರಿಗೆ ಉಪೇಂದ್ರ ಕಂಡಿಶನ್ ಹಾಕಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಮಾತ್ರ ಬನ್ನಿ. ಇಲ್ಲವಾದರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಎಂದು ಉಪೇಂದ್ರ ಹೇಳಿದ್ದಾರೆ.
ಬೆಂಗಳೂರು (ಡಿ.01): ರಾಜಕೀಯ ಸಂಚಲನ ಮೂಡಿಸಿರುವ ಉಪೇಂದ್ರರವರ ಪ್ರಜಾಕೀಯ ಪಕ್ಷಕ್ಕೆ ಬರುವವರಿಗೆ ಉಪೇಂದ್ರ ಕಂಡಿಶನ್ ಹಾಕಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಮಾತ್ರ ಬನ್ನಿ. ಇಲ್ಲವಾದರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಎಂದು ಉಪೇಂದ್ರ ಹೇಳಿದ್ದಾರೆ.
ಪಕ್ಷ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ುಪೇಂದ್ರ ಸುವರ್ಣ ನ್ಯೂಸ್ ಜೊತೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಜಾತಿ ಮತ್ತು ಹಣದ ರಾಜಕಾರಣ ಮಾಡುವರು ವಿರುದ್ಧ ಈ ಪ್ರಜಾಕೀಯ ಪಕ್ಷ ಹುಟ್ಟಿದೆ. ಈ ಪಕ್ಷದಲ್ಲಿ ಜನಗಳ ನಿರ್ಧಾರಕ್ಕೆ ತುಂಬಾ ಮಹತ್ವದಾಗಿರುತ್ತದೆ.
ನಾನಷ್ಟೇ ಬುದ್ಧಿವಂತವನಲ್ಲ, ಜನರು ತುಂಬಾ ಬುದ್ಧಿವಂತರಿದ್ದಾರೆ. ಅವರೆಲ್ಲರ ಯೋಚನೆಯನ್ನು ಇಟ್ಟುಕೊಂಡು ನಾವು ಕೆಲಸ ಮಾಡುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ.
ಪಕ್ಷದ ಅಭಿವೃದ್ಧಿಗೆ ಹಲವು ಪ್ಲಾನ್ ಮಾಡಲಾಗಿದೆ. ಕೆಪಿಜೆಪಿ ಪಕ್ಷ ಕ್ಯಾಶ್'ಲೇಶ್ ಪಾರ್ಟಿ ಹುಟ್ಟುಹಾಕಿದ್ದೇವೆ. ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು. ಕ್ಷೇತ್ರವಾರು ನಾವು ಬಜೆಟ್ ಮಾಡಬೇಕು. ನಮ್ಮ ಪಕ್ಷಕ್ಕೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಉಪೇಂದ್ರ ಹೇಳಿದ್ದಾರೆ.
