ಕೆಲ ಹುದ್ದೆಗಳಿಗೆ ಬೇಡಿಕೆಯಿಟ್ಟು ಮುಖ್ಯಮಂತ್ರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಬರೆದಿದ್ದ ಪತ್ರವೊಂದು ಸೋರಿಕೆಯಾಗಿ ದೊಡ್ಡ ಸುದ್ದಿ ಮಾಡುತ್ತಿದೆ.

ನವದೆಹಲಿ[ಆ.27] ರಾಮ ಮಂದಿರ ನಿರ್ಮಾಣ ಸಂಬಂಧ ಮಾಧ್ಯಮಗಳ ಮುಂದೆ ಬಂದಿದ್ದ ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ಸಿಎಂ ಯೋಗಿ ಆದಿತ್ಯನಾಥ್ ಗೆ ಬರೆದ ಪತ್ರ ವಿವಾದ ಎಬ್ಬಿಸಿದೆ.

Add Asianetnews Kannada as a Preferred SourcegooglePreferred

ಹಿರಿಯ ಪೊಲೀಸ್ ಅಧಿಕಾರಿ ಸುರ್ಯ ಕುಮಾರ್ ಶುಕ್ಲಾ ಸಿಎಂ ಗೆ ಪತ್ರ ಬರೆದಿದ್ದು ಖಾಲಿ ಇರುವ ನಾಲ್ಕು ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಜುಲೈ 23 ರಂದು ಅಧಿಕೃತ ಲೆಟರ್ ಹೆಡ್ ನಲ್ಲೇ ಬರೆದಿರುವ ಪತ್ರ ಇದೀಗ ಸೋರಿಕೆಯಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸರಕಾರದ ಪರವಾಗಿ ಬೇಕಾದರೆ ಕೆಲಸ ಮಾಡುತ್ತೇನೆ ಎಂದಿರುವ ಐಪಿಎಸ್ ಅಧಿಕಾರಿ ರಾಜ್ಯ ಯೋಜನಾ ಆಯೋಗ, ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ.