ಈ ಚಿಪ್‌ ಬೆಲೆ 3000 ರೂ. ಆಗಿದೆ. ರಿಮೋಟ್ ಕಂಟ್ರೋಲ್‌'ಗೆ ಲಿಂಕ್ ಇರುವ ವೈರ್‌'ಗೆ ಈ ಚಿಪ್ ಅಟ್ಯಾಚ್ ಆಗಿರುತ್ತದೆ. ಈ ಮೂಲಕ ಗ್ರಾಹಕರಿಗೆ ಪೆಟ್ರೋಲ್ ಹಾಕುವಾಗ ಮೋಸ ಮಾಡುತ್ತಾರೆ ಎನ್ನಲಾಗ್ತಿದೆ.
ನವದೆಹಲಿ(ಮೇ 01): ಪೆಟ್ರೋಲ್ ಬಂಕ್'ಗಳಲ್ಲಿ ಪೆಟ್ರೋಲ್ ಹಾಕುವ ಮಶೀನ್'ನಲ್ಲಿ ರಿಮೋಟ್ ಕಟ್ರೋಲ್ಡ್ ಎಲೆಕ್ಟ್ರಾನಿಕ್ಸ್ ಚಿಪ್ ಬಳಸಿ ಜನರಿಗೆ ಮೋಸ ಮಾಡಲಾಗುತ್ತಿರುವ ಪ್ರಕರಣ ಉತ್ತರಪ್ರದೇಶದಲ್ಲಿ ಬಯಲಿಗೆ ಬಂದಿದೆ. ಜನರ ಕಣ್ಮುಂದೆಯೇ ಅವರಿಗೆ ಗೊತ್ತಾಗದಂತೆ ಪಂಪ್'ನವರು ಪೆಟ್ರೋಲ್ ಕದಿಯುತ್ತಿದ್ದಾರೆ.
ಉತ್ತರ ಪ್ರದೇಶದ 7 ಪೆಟ್ರೋಲ್ ಪಂಪ್'ಗಳ ಮೇಲೆ ಎಸ್'ಟಿಎಫ್ ಪಡೆ ಕಾರ್ಯಾಚರಣೆ ನಡೆಸಿದಾಗ ಪೆಟ್ರೋಲ್ ಹಾಕುವ ಮಶೀನ್'ನಲ್ಲಿ ಚಿಪ್ ಬಳಸಿದ್ದು ಕಂಡು ಬಂದಿದೆ. ಸವಾರರು 1 ಲೀಟರ್ ಪೆಟ್ರೋಲ್ ಕೇಳಿದ್ರೆ ಈ ಚಿಪ್ ಸಹಾಯದಿಂದ ವಾಹನಕ್ಕೆ 940ರಿಂದ 950 ಎಂಎಲ್ ಮಾತ್ರ ಬೀಳುತ್ತದೆ. ಇದರಿಂದ 50ರಿಂದ 60 ಮಿ.ಲೀಟರ್ ಪೆಟ್ರೋಲ್ ಪಂಪ್'ನವರಲ್ಲೇ ಉಳಿಯುತ್ತದೆ.
ಇನ್ನು, ಈ ಚಿಪ್ ಬೆಲೆ 3000 ರೂ. ಆಗಿದೆ. ರಿಮೋಟ್ ಕಂಟ್ರೋಲ್'ಗೆ ಲಿಂಕ್ ಇರುವ ವೈರ್'ಗೆ ಈ ಚಿಪ್ ಅಟ್ಯಾಚ್ ಆಗಿರುತ್ತದೆ. ಈ ಮೂಲಕ ಗ್ರಾಹಕರಿಗೆ ಪೆಟ್ರೋಲ್ ಹಾಕುವಾಗ ಮೋಸ ಮಾಡುತ್ತಾರೆ ಎನ್ನಲಾಗ್ತಿದೆ.
