ರಾಜ್ಯದ ಎಲ್ಲಾ ಜೈಲುಗಳಲ್ಲಿ ಗೋಶಾಲೆ ತೆರೆಯುವ ಬಗ್ಗೆ ಉತ್ತರಪ್ರದೇಶದ ಬಂಧೀಖಾನೆ ಇಲಾಖೆ ಚಿಂತನೆ ನಡೆಸಿದೆ. ಜೈಲುಗಳಲ್ಲಿ ಸಾಕಷ್ಟು ಜಾಗದ ಲಭ್ಯತೆ ಇರುತ್ತದೆ, ರಕ್ಷಣೆಯೂ ಇರುತ್ತದೆ. ಹೀಗಾಗಿ ಸರ್ಕಾರೇತರ ಸಂಸ್ಥೆ ಗಳು ಮತ್ತು ಸಂಘ- ಸಂಸ್ಥೆಗಳ ನೆರವಿನಿಂದ ಗೋಶಾಲೆ ಆರಂಭಿಸಲು ಚಿಂತಿಸಲಾಗಿದೆ.

ಲಖನೌ: ರಾಜ್ಯದ ಎಲ್ಲಾ ಜೈಲುಗಳಲ್ಲಿ ಗೋಶಾಲೆ ತೆರೆಯುವ ಬಗ್ಗೆ ಉತ್ತರಪ್ರದೇಶದ ಬಂಧೀಖಾನೆ ಇಲಾಖೆ ಚಿಂತನೆ ನಡೆಸಿದೆ.

ಜೈಲುಗಳಲ್ಲಿ ಸಾಕಷ್ಟು ಜಾಗದ ಲಭ್ಯತೆ ಇರುತ್ತದೆ, ರಕ್ಷಣೆಯೂ ಇರುತ್ತದೆ. ಹೀಗಾಗಿ ಸರ್ಕಾರೇತರ ಸಂಸ್ಥೆ ಗಳು ಮತ್ತು ಸಂಘ- ಸಂಸ್ಥೆಗಳ ನೆರವಿನಿಂದ ಗೋಶಾಲೆ ಆರಂಭಿಸಲು ಚಿಂತಿಸಲಾಗಿದೆ.

ಜೊತೆಗೆ ಕೈದಿಗಳ ಸೇವೆ ಬಳಸಿಕೊಳ್ಳಲಾಗುವುದು. ಗೋವುಗಳಿಂದ ಲಭ್ಯವಾಗುವ ಹಾಲನ್ನು ಜೈಲಿನಲ್ಲೇ ಬಳಸಿಕೊಳ್ಳಲಾಗುವುದು. ಜೊತೆಗೆ ಗೋವುಗಳಿಂದ ಲಭ್ಯವಾಗುವ ಗೊಬ್ಬರ ಬಳಸಿ ಜೈಲಿನ ಆವರಣದಲ್ಲಿಯೇ ಸಾವಯವ ಕೃಷಿ ನಡೆಸುವ ಆಲೋಚನೆ ಇದೆ ಎಂದು ಸರ್ಕಾರ ಹೇಳಿದೆ.