ಬಿಎಸ್ಪಿಗೆ 'ಬೆಹನ್ಜಿ ಸಂಪತ್ತಿ ಪಕ್ಷ' ಎಂದು ಲೇವಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮಾಯಾವತಿ ಅದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ನರೇಂದ್ರ ದಾಮೋದರ್ ದಾಸ್ ಮೋದಿಯಲ್ಲ ‘ನೆಗೆಟಿವ್ ದಲಿತ್ ಮ್ಯಾನ್’ ಎಂದು ಹೊಸ ವ್ಯಾಖ್ಯಾನ ನೀಡಿದ್ದಾರೆ.

ನವದೆಹಲಿ (ಫೆ.20): ಬಿಎಸ್ಪಿಗೆ 'ಬೆಹನ್ಜಿ ಸಂಪತ್ತಿ ಪಕ್ಷ' ಎಂದು ಲೇವಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮಾಯಾವತಿ ಅದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ನರೇಂದ್ರ ದಾಮೋದರ್ ದಾಸ್ ಮೋದಿಯಲ್ಲ ‘ನೆಗೆಟಿವ್ ದಲಿತ್ ಮ್ಯಾನ್’ ಎಂದು ಹೊಸ ವ್ಯಾಖ್ಯಾನ ನೀಡಿದ್ದಾರೆ.

ಬಿಎಸ್ಪಿಯಲ್ಲಿ ಚಳುವಳಿ ಮೊದಲು ಆ ನಂತರ ಪಕ್ಷ ಎನ್ನುವುದು ಪ್ರಧಾನ ಮಂತ್ರಿಗೆ ತಿಳಿದಿಲ್ಲ. ನನ್ನ ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಅಲ್ಪಸಂಖ್ಯಾತ ಮುಸ್ಲೀಂಮರ ಏಳಿಗೆಗಾಗಿ ಹೆಚ್ಚಿನ ಸಮಯ ಶ್ರಮಿಸಿದ್ದೇನೆ. ಮೋದಿಯವರು ಬಿಎಸ್ಪಿಯನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ದಲಿತರು,

ಶೋಷಿತರು, ಬಡವರಿಗಾಗಿ ನನ್ನ ಜೀವನವನ್ನು ಸಮರ್ಪಿಸಿದ್ದೇನೆ. ಅವರು ನನ್ನನ್ನು ‘ಸಂಪತ್ತಿ’ ಎಂದು ಭಾವಿಸಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.