ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ರಾಮ್ ನಾಯ್ಕ್ ಯೋಗ ಗುರು ಬಾಬಾ ರಾಮ್ ದೇವ್ ಜೊತೆ ಸೇರಿ ಯೋಗಾಭ್ಯಾಸ ಮಾಡಲಿದ್ದಾರೆ.
ಲಕ್ನೋ (ಜೂ.06): ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ರಾಮ್ ನಾಯ್ಕ್ ಯೋಗ ಗುರು ಬಾಬಾ ರಾಮ್ ದೇವ್ ಜೊತೆ ಸೇರಿ ಯೋಗಾಭ್ಯಾಸ ಮಾಡಲಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನದಂದು ರಾಜಭವನದಲ್ಲಿ ಯೋಗಿ ಆದಿತ್ಯನಾಥ್, ರಾಮ್ ನಾಯ್ಕ್ ಹಾಗೂ ರಾಮ್ ದೇವ್ ಬೇರೆ ಬೇರೆ ಯೋಗಾಸನಗಳನ್ನು ಮಾಡಿ ತೋರಿಸಲಿದ್ದಾರೆ.
ಲಕ್ನೋದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 50 ಸಾವಿರ ಯೋಗ ಅಭ್ಯಾಸ ಮಾಡುವವರೊಂದಿಗೆ ಸೇರಿ ಬೇರೆ ಬೇರೆ ಆಸನಗಳನ್ನು ಹಾಕಲಿದ್ದಾರೆ. ಈವೆಂಟ್ ನ ಮಹತ್ವವನ್ನು ಸಾರಲು ಯೋಗ ಸಾಂಕೇತಿಕ ಅಕ್ಷರಗಳಿರುವ ಟೀ-ಶರ್ಟ್, ಮಿನರಲ್ ವಾಟರ್ ಬಾಟಲಿಯನ್ನು ನೀಡಲಾಗುತ್ತದೆ.
